ವಾಯುಮಾಲಿನ್ಯದ ವಿರಾಟ್ ರೂಪ : ಪ್ರತಿ ನಿಮಷಕ್ಕೆ ಇಬ್ಬರು ಬಲಿ

delhi
ನವದೆಹಲಿ, ಫೆ.19-ವಾಯು ಮಾಲಿನ್ಯದ ಭಯಂಕರ ವಿರಾಟ್ ರೂಪದ ವಿವಿಧ ಮುಖಗಳು ಅನಾವರಣಗೊಳ್ಳುತ್ತಿರುವಾಗಲೇ, ಈ ಗಂಭೀರ ಸಮಸ್ಯೆಯಿಂದಾಗಿ ಪ್ರತಿ ನಿಮಷಕ್ಕೆ ಇಬ್ಬರು ಭಾರತೀಯರು ಬಲಿಯಾಗುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿಯೊಂದನ್ನು ಹೊಸ ವರದಿಯೊಂದು ಬಹಿರಂಗಗೊಳಿಸಿದೆ. ಭಾರತೀಯರು ಉಸಿರಾಡುತ್ತಿರುವ ಗಾಳಿಯು ದಿನೇ ದಿನೇ ಹೆಚ್ಚು ವಿಷಯುಕ್ತವಾಗುತ್ತಿದೆ. ಪ್ರತಿ ನಿಮಿಷಕ್ಕೆ ಇಬ್ಬರು ಸಾವಿಗೀಡಾಗುತ್ತಿದ್ಧಾರೆ ಎಂದು ವೈದ್ಯಕೀಯ ನಿಯತಕಾಲಿಕ ದಿ ಲಾನ್ಸೆಟ್ ನಡೆಸಿದ ಹೊಸ ಅಧ್ಯಯನವೊಂದು ತಿಳಿಸಿದೆ. ವಾಯು ಮಾಲಿನ್ಯವು ಪ್ರತಿ ವರ್ಷ ಹತ್ತು ಲಕ್ಷ ಭಾರತೀಯರನ್ನು ಬಲಿ ತೆಗೆದುಕೊಳ್ಳುತ್ತಿದೆ. ವಿಶ್ವದಲ್ಲಿರುವ ಕೆಲವು ಅತ್ಯಂತ ಕೆಟ್ಟ ವಾಯುಮಾಲಿನ್ಯ ಮತ್ತು ಕಲುಷಿತ ನಗರಗಳು ಭಾರತದಲ್ಲಿವೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin