ವಾಲ್ಮೀಕಿ ಭಾವಚಿತ್ರಕ್ಕೆ ಅಪಮಾನ ಮಾಡಿದವರ ಬಂಧನಕ್ಕೆ ಒತ್ತಾಯ

arrest

ಬೇಲೂರು, ಅ.17- ಪಟ್ಟಣದ ವಾಲ್ಮೀಕಿ ನಗರದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವ ಚಿತ್ರಕ್ಕೆ ಅಪಮಾನ ವೆಸಗಿದವರನ್ನು ಇದೇ 30 ರೊಳಗೆ ಬಂಧಿಸದಿದ್ದರೆ ತಾಲೂಕು ವಾಲ್ಮೀಕಿ ಸಂಘದಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ವಾಲ್ಮೀಕಿ ಸಂಘದ ಆಧ್ಯಕ್ಷ ಕುಮಾರನಾಯ್ಕ ಎಚ್ಚರಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಕೇಶವ ದೇವಾಲಯ ಹಿಂಭಾಗದ ಬ್ಯಾಡರಕೆರಿಗೆ ವಾಲ್ಮೀಕಿ ನಗರವೆಂದು ನಾಮಕರಣ ಮಾಡಿ ವಾಲ್ಮೀಕಿರವರ ಭಾವಚಿತ್ರ ಹಾಕಿದ್ದೆವು, ಅದರೆ ಕೆಲ ಕಿಡಿಗೇಡಿಗಳು ಅಪಮಾನವೇಸಗಿ ತಿಂಗಳು ಕಳೆದರೂ ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೆ ಕಿಡಿಗೇಡಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ ಅವರು ಪಟ್ಟಣದಲ್ಲಿ ನಾಳೆ ಚನ್ನಕೇಶವ ದೇವಾಲಯದ ಮುಂಭಾಗದ ಬಯಲು ರಂಗಮಂದಿರದ ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ತಾಲೂಕು ವಾಲ್ಮೀಕಿ ನಾಯಕರ ಸಂಘದಿಂದ ಮಹರ್ಷಿ ವಾಲ್ಮೀಕಿಯವರ ಜಯಂತಿ ಮಹೋತ್ಸವ ಏರ್ಪಡಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಶಾಸಕ ವೈ.ಎನ್.ರುದ್ರೇಶಗೌಡ ಭಾಗವಹಿಸಲಿದ್ದಾರೆ.ವಾಲ್ಮೀಕಿ ಸಮಾಜದ ಮುಖಂಡರಾದ ರಂಗನಾಥ್, ಕುಮಾರ್, ಲಕ್ಮಣನಾಯ್ಕ, ಸುನೀಲ್‍ನಾಯ್ಕ ಇದ್ದರು.

 

► Follow us on –  Facebook / Twitter  / Google+

Sri Raghav

Admin