ವಾಲ್ಮೀಕಿ ಸಮುದಾಯ ಭವನ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರೂ. ಬಿಡುಗಡೆ

1
ಹೂವಿನಹಡಗಲಿ,ಮಾ.13- ಪಟ್ಟಣದ ವಾಲ್ಮೀಕಿ ಸಮುದಾಯ ಭವನದ ಕಾಂಪೌಂಡ್ ಕಟ್ಟಡಕ್ಕೆ ನಿರ್ಮಾಣಕ್ಕೆ 10 ಲಕ್ಷ ರೂ ಬಿಡುಗಡೆಗೊಂಡಿದ್ದು, ಕಾಮಗಾರಿ ಆರಂಭಗೊಂಡಿದೆ ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.ಪಟ್ಟಣದ ವಾಲ್ಮೀಕಿ ಸಮುದಾಯ ಭವನದ ಕಟ್ಟಡ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಮುದಾಯ ಭವನ ಕಟ್ಟಡಕ್ಕೆ ಅನುದಾನ ಬಿಡುಗಡೆಗೊಂಡಿದ್ದು, ಪ್ರಥಮ ಹಂತದ ಮಹಡಿ ಕಟ್ಟಡ ಕೆಲಸ ತೀವ್ರಗತಿಯಲ್ಲಿ ಸಾಗಿದೆ ಎಂದು ಅವರು ತಿಳಿಸಿದರು.  ಸಮಾಜ ಬಾಂಧವರು ಇನ್ನೂ ಹೆಚ್ಚಿನ ಅನುದಾನವನ್ನು ನೀಡುವುದರ ಮೂಲಕ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ. ಈಗಾಗಲೇ ಕೆಳಹಂತದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಒಟ್ಟಾರೆ, ವಾಲ್ಮೀಕಿ ಸಮುದಾಯ ಭವನವನ್ನು ಒಂದು ಸುಸರ್ಜಿತವಾದ ಕಟ್ಟಡವನ್ನಾಗಿ ನಿರ್ಮಾಣ ಮಾಡಲು ಸಿದ್ಧವಿರುವುದಾಗಿ ಹೇಳಿದರು.

ಅಲ್ಲದೆ, ಬಂಜಾರ್ ಸಮುದಾಯ ಭವನ ಮೊದಲನೇ ಹಂತದ ಮಹಡಿ ಕಟ್ಟಡಕ್ಕೆ ಅನುದಾನ ಬಿಡುಗಡೆಗೊಂಡಿದೆ. ಸೋಮವಾರದಿಂದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು. ಪಂಚಮಸಾಲಿ ಸಮುದಾಯ ಭವನ ನಿರ್ಮಾಣಕ್ಕೆ 75ಲಕ್ಷ ರೂ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಶೀಘ್ರದಲ್ಲಿಯೇ ಸಮುದಾಯ ಭವನ ಕಟ್ಟಡ ಆರಂಭಗೊಳ್ಳಿದೆ. ಶಹದಿಮಹಲ್ ಕಟ್ಟಡಕ್ಕೆ 50ಲಕ್ಷ ರೂ ಅನುದಾನ ಬಿಡುಗಡೆಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು.

ಒಟ್ಟಾರೆ, ಜೂನ್ ಜುಲೈ ವೇಳೆಗೆ ವಾಲ್ಮೀಕಿ ಭವನ ಸೇರಿದಂತೆ ಎಲ್ಲಾ ಸಮುದಾಯ ಭವನಗಳ ಕಟ್ಟಡವನ್ನು ಪೂರ್ಣಗೊಳಿಸಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳು ಮತ್ತು ಸಂಬಂಧಪಟ್ಟ ಗುತ್ತಿಗೆದಾರರಿಗೆ ನೀಡಿರುವುದಾಗಿ ಹೇಳಿದ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಬಹುದಿನಗಳಿಂದ ನೆನೆಗುದಿಗೆ ಬಿದಿದ್ದಿ, ಸರ್ಕಾರಿ ಇಂಜಿನೀಯರಿಂಗ್ ಕಾಲೇಜ್ ಕಟ್ಟಡ ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭೈ ಸದಸ್ಯರಾದ ಎಸ್. ತಿಮ್ಮಣ್ಣ, ಯು. ಹನುಮಂತಪ್ಪ, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಎಲ್.ಜಿ. ಹೊನ್ನಪ್ಪನವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಬ್ಲಾಕ್ ಅಧ್ಯಕ್ಷ್ ಐಗೋಳ್ ಚಿದಾನಂದ, ಅಟವಾಳಗಿ ಕೊಟ್ರೇಶ್, ತಾಪಂ ಸದಸ್ಯ ಎಸ್. ಹಾಲೇಶ್, ಸಮಾಜದ ಮುಖಂಡರಾದ ಪರಮೇಶ್ವರಪ್ಪ ಸೇರಿದಂತೆ ಇತರರು ಇದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin