ವಿಜಯ್-ಪೂಜಾರ ಅರ್ಧಶತಕ, ಉತ್ತಮ ಮೊತ್ತದತ್ತ ಭಾರತ

Vijaya--01

ಹೈದರಾಬಾದ್,ಫೆ.9-ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ದ ಟೆಸ್ಟ್ ನಲ್ಲಿ ಸರಣಿ ಗೆದ್ದಿರುವ ಭಾರತ ಬಾಂಗ್ಲಾದೇಶದ ವಿರುದ್ದ ನಡೆಯುತ್ತಿರುವ ಏಕೈಕ ಟೆಸ್ಟ್ನಲ್ಲಿ ಉತ್ತಮ ಆರಂಭ ಪಡೆದಿದೆ. ಇಲ್ಲಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ನಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆರಂಭಿಕರಾಗಿ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಮುರುಳಿ ವಿಜಯ್ ಕಣಕ್ಕಿಳಿದಿದ್ದು , ತಂಡ ಮೊತ್ತ ಎರಡು ರನ್ ಆಗುವಷ್ಟರಲ್ಲೇ ರಾಹುಲ್(2) ಟಸ್ಕಿನ್ ಅಹಮ್ಮದ್ ಬೌಲಿಂಗ್‍ನಲ್ಲಿ ಮೊದಲನೇ ಓವರ್‍ನಲ್ಲೇ ಬೋಲ್ಡ್ ಆಗಿ ಹೊರನಡೆದರು.

ರಾಹುಲ್‍ರವರ ವಿಕೆಟ್ ಕಳೆದುಕೊಂಡ ಭಾರತ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. ನಂತರ ಕ್ರೀಸ್‍ಗಿಳಿದ ಚೇತೇಶ್ವರ ಪೂಜಾರ್ ವಿಜಯ್‍ಗೆ ಸಾಥ್ ನೀಡಿ ಆಟ ಮುಂದುವರೆಸಿದ್ದಾರೆ.
ವಿಜಯ್-ಪೂಜಾರ ಅರ್ಧಶತಕ: ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಅದ್ಭುತ ಪ್ರದರ್ಶನ ನೀಡಿ ಉತ್ತಮ ಲಯದಲ್ಲಿರುವ ವಿಜಯ್ ಮತ್ತು ಚೇತೇಶ್ವರ ಪೂಜಾರ್ ಇಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಅದೇ ಲಯ ಕಾಯ್ದುಕೊಂಡಿದ್ದಾರೆ.   ಮುರುಳಿವಿಜಯ್(58) ಹಾಗೂ ಪೂಜಾರ(50) ಜೊತೆಯಾಟದಲ್ಲಿ ಒಟ್ಟು 115 ರನ್ ಬಾರಿಸಿದ್ದು ಆಟ ಮುಂದುವರೆಸಿದ್ದಾರೆ. ಅಂತಿಮವಾಗಿ ಭಾರತ ಪತ್ರಿಕೆ ಮುದ್ರಣವಾಗುವ ಸಮಯದಲ್ಲಿ 1 ವಿಕೆಟ್ ನಷ್ಟಕ್ಕೆ 115 ರನ್ ಕಲೆ ಹಾಕಿದೆ.  ತ್ರಿಶಕ ವೀರ ನಾಯರ್‍ಗಿಲ್ಲ ಅವಕಾಶ: ಇಂಗ್ಲೆಂಡ್ ವಿರುದ್ದ ತ್ರಿಶಕ ಬಾರಿಸಿ ಅದ್ಭುತ ಫಾರ್ಮ್‍ನಲ್ಲಿರುವ ಕನ್ನಡಿಗ ಕರುಣ್ ನಾಯರ್‍ಗೆ ಬಾಂಗ್ಲಾ ವಿರುದ್ದದ ಪಂದ್ಯದಲ್ಲಿ ಅವಕಾಶ ನೀಡಲಿಲ್ಲ. ಹೀಗಾಗಿ ನಾಯರ್ ಬದಲಿಗೆ ಅಜಿಂಕೆ ರಹಾನೆ ಅವರನ್ನು ಕಣಕ್ಕಿಳಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin