ವಿದೇಶದಲ್ಲೂ ಮಹತ್ವ ಪಡೆಯುತ್ತಿರುವ ಕಬಡ್ಡಿ : ಬಾಲಕೃಷ್ಣ

kabbadi

ಹಿರೀಸಾವೆ, ಅ.6- ಜನಪ್ರಿಯ ಆಟವಾಗಿರುವ ಕಬಡ್ಡಿ ವಿದೇಶಗಳಲ್ಲಿಯೂ ಮಹತ್ವ ಪಡೆದಿದ್ದು, ಈ ಆಟ ಕ್ರಿಕೆಟ್‍ಗೆ ಸರಿಸಮಾನವಾಗಿ ಬೆಳೆಯುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಮೈಸೂರು ವಿಶ್ವವಿದ್ಯಾನಿಲಯ ಮಲೆನಾಡು ವಲಯದ ಅಂತರ ಕಾಲೇಜುಗಳ ಪುರುಷರ 2016-17ನೇ ಸಾಲಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ಕಬ್ಬಡಿ ಆಟದ ಮೂಲ ಕರ್ನಾಟಕವಾಗಿದ್ದು, ಯಾವುದೇ ಕ್ರೀಡೆಗಳು ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕವಾಗಿ ದೇಹವನ್ನು ಸದೃಢಗೊಳಿಸುತ್ತದೆ. ಕ್ರೀಡೆಗಳಲ್ಲಿ ಪರಿಣಿತರಾದವರು ಉನ್ನತ ಸ್ಥಾನ ಅಲಂಕರಿಸಬಹುದು. ಕ್ರೀಡೆಗಳನ್ನು ಕಲಿಯಲು ಶ್ರಮ ಮುಖ್ಯ ಎಂದರು.
ಪ್ರಭಾರಿ ಪ್ರಾಂಶುಪಾಲ ಜಯಕೀರ್ತಿ, ತಾಪಂ ಸದಸ್ಯೆ ಎಚ್.ಎಸ್.ಶಾಮಲಾಉದಯಕುಮಾರ್, ಗ್ರಾಪಂ ಅಧ್ಯಕ್ಷ ಎಚ್.ಜೆ.ಮಹೇಶ್, ತಾಪಂ ಮಾಜಿ ಸದಸ್ಯ ಎಚ್.ಜಿ.ರಾಮಕೃಷ್ಣ, ರೈತ ಸಂಘದ ಅಧ್ಯಕ್ಷ ಎಚ್.ವಿ.ಕೃಷ್ಣೇಗೌಡ, ಉಪಾಧ್ಯಕ್ಷ  ಬಿ.ಆರ್. ಜಯಣ್ಣ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಎಸ್.ಶಿವಸ್ವಾಮಿ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin