ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿಯಿಂದ ಹೊರ ಬನ್ನಿ

Spread the love

ಕೆ.ಆರ್.ಪೇಟೆ, ಫೆ.16- ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿ ಯಿಂದ ಹೊರಬರಬೇಕು. ಹದಿಹರೆಯದ ವಯಸ್ಸಿನಲ್ಲಿಯೇ ಪ್ರೀತಿ-ಪ್ರೇಮದ ಬಲೆಗೆ ಸಿಲುಕಿ ತಮ್ಮ ಭವಿಷ್ಯಕ್ಕೆ ಕಲ್ಲು ಹಾಕಿಕೊಳ್ಳದೆ, ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಉನ್ನತ ಸ್ಥಾನಕ್ಕೇರಬೇಕೆಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕರೆ ನೀಡಿದರು.ಪಟ್ಟಣದ ಶ್ರೀ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯ ಅವರ ಕೈಯಲ್ಲಿಯೇ ಇದೆ. ಯಾವುದೇ ರಾಜಕಾರಣಿಗಳ ಅಥವಾ ಉನ್ನತ ಅಧಿಕಾರಿಗಳ ಪ್ರಭಾವ ಬಳಸಿ ಅಥವಾ ಹಣಬಲದಿಂದ ಉದ್ಯೋಗ ಪಡೆಯುವ ಕಾಲ ಮುಗಿದಿದೆ. ಈಗ ಏನಿದ್ದರೂ ಸ್ಪರ್ಧಾಯುಗ. ವಿದ್ಯಾರ್ಥಿಗಳು ತಮ್ಮ ಜ್ಞಾನ ಬಲದಿಂದ ಉದ್ಯೋಗ ಪಡೆದು ಮುಂದೆ ಬರಬೇಕು ಎಂದರು.ಆರಕ್ಷಕ ವೃತ್ತ ನಿರೀಕ್ಷಕ ಹೆಚ್.ಬಿ.ವೆಂಕಟೇಶಯ್ಯ ಮಾತನಾಡಿ, ಪೊಲೀಸರು ಕಾನೂನಿಗೆ ನಿಷ್ಠರು ಮತ್ತು ಸಮಾಜದ ರಕ್ಷಕರು. ಪೊಲೀಸರ ಬಗ್ಗೆ ಭಯ ಮತ್ತು ಅಪನಂಬಿಕೆಗಳು ಬೇಡ.

ನಮೊಂದಿಗೆ ಸ್ನೇಹಭಾವ ಪ್ರದರ್ಶಿಸಿ. ಅಪರಾಧಿಗಳ ಬಗ್ಗೆ ಮೌನ ವಹಿಸದೆ ನಮ್ಮೊಂದಿಗೆ ಸಹಕರಿಸಿ ಎಂದು ಹೇಳಿದರು.ಕಾಲೇಜಿನ ಹಿರಿಯ ವಿದ್ಯಾರ್ಥಿ ತಾಲೂಕು ಪಂಚಾಯತಿ ಸದಸ್ಯ ಬಿ.ಎನ್.ದಿನೇಶ್(ರಾಜಾಹುಲಿ) ಅವರನ್ನು ವಿದ್ಯಾರ್ಥಿ ಸಂಘದ ವತಿಯಿಂದ ಗೌರವಿಸಲಾಯಿತು. ಆಕಸ್ಮಿಕವಾಗಿ ನಿಧನರಾದ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಬಂದಿಗೇಗೌಡ ಅವರಿಗೆ ಇದೆ ಸಂದರ್ಭದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.ಬಂಡಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ರಾಮಯ್ಯ, ಸಂಸ್ಥೆಯ ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಪುರಸಭಾ ಸದಸ್ಯ ಕೆ.ಬಿ.ನಂದೀಶ್, ತಾ.ಪಂ ಸದಸ್ಯ ಬಿ.ಎನ್.ದಿನೇಶ್, ಶಾಸಕರ ಸಹೋದರ ಕೆ.ಸಿ.ರಾಮಚಂದ್ರೇಗೌಡ, ಪ್ರಾಂಶುಪಾಲ, ಉಪನ್ಯಾಸಕ ಎಂ.ಕೆ.ಹರಿಚರಣತಿಲಕ್, ಕೃಷ್ಣಪ್ಪ, ಸಿ.ಕೆ.ನಂಜೇಗೌಡ, ಹರೀಶ್ ಬಾಬು, ಎನ್.ರಾಮಲಿಂಗು ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin