ವಿದ್ಯಾರ್ಥಿಗಳ ಗುರಿ ಸಾಧನೆಗೆ ಇಚ್ಚಾಶಕ್ತಿ ಅಗತ್ಯ : ನಾಗರಾಜ್

hosakote

ಹೊಸಕೋಟೆ, ಸೆ.22- ವಿದ್ಯಾರ್ಥಿಗಳು ಗುರಿ ಸಾಧನೆಗೆ ಇಚ್ಚಾಶಕ್ತಿ ಅಗತ್ಯ ಎಂದು ಶಾಸಕ ನಾಗರಾಜ್ ತಿಳಿಸಿದರು. ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೊಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ದೈಹಿಕ ಹಾಗೂ ಮಾನಸಿಕ ಸಮತೋಲನ ಬೆಳವಣಿಗೆಗೆ ಕ್ರೀಡಾಭ್ಯಾಸ ಸಹಕಾರಿ ಎಂದರು. ಕಠಿಣ ಪರಿಶ್ರಮ, ಶ್ರದ್ದೆಯಿಂದ ಕ್ರೀಡಾಭ್ಯಾಸದಲ್ಲಿ ತೊಡಗುವ ಮೂಲಕ ಯಶಸ್ಸನ್ನು ಪಡೆಯಬೇಕು ಎಂದು ಶಾಸಕ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಪಂ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ನಮ್ಮ ರಾಷ್ಟರದಲ್ಲಿ 110 ಕೋಟಿ ಜನಸಂಖೆ ಇದ್ದರೂ ಒಲಂಪಿಕ್ ಕ್ರೀಡಾಕೊಟದಲ್ಲಿ ಉತ್ತಮ ಸಾಧನೆ ತೊರುವಲ್ಲಿ ಮತ್ತು ಪದಕಗಳನ್ನು ಪಡೆಯುವಲ್ಲಿ ನಾವಿನ್ನು ಕನಸ್ಸಾಗೆ ಉಳಿದಿದ್ದೇವೆ. ಸೂಕ್ತ ಪ್ರತಿಭೆಗಳನ್ನು ಪ್ರೊ ರೀತ್ಸಾಹಿಸಿ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಇಂತಹ ಕೊರತೆಯನ್ನು ನಿವಾರಿಸಬೇಕಿದೆ ಎಂದರು.  ತಾಲ್ಲೂಕಿನ ಶಿಡ್ಲಘಟ್ಟ ರಸ್ತೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಶಾಲೆ ಮತ್ತು ಹಾಸ್ಟೆಲ್ ನಿರ್ಮಿಸಲು 11 ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು. ಗ್ರಾಮೀಣ ಪ್ರದೇಶಗಳಲ್ಲಿ ಕೌಶಲ್ಯ ಪ್ರತಿಭೆಗಳನ್ನು ಗುರ್ತಿಸಿ ಪ್ರೊ ರೀತ್ಸಸಾಹಿಸಿ ಎಂದು ತಿಳಿಸಿದರು.

ತಾ.ಅಧ್ಯಕ್ಷರಾದ ಕೆಂಚೇಗೌಡ, ಜಿಪಂ ಸದಸ್ಯರಾದ ವೈಎಸೆಂ ಮಂಜುನಾಥ್, ನಗರಸಭೆ ಅಧ್ಯಕ್ಷರಾದ ಗುಲಾಬ್ ಜಾನ್, ಉಪಾಧ್ಯಕ್ಷರಾದ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ್, ಬಿಇಒ ಬೈಲಾಂಜಿನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಘು ವೀರ್, ದೈಹಿಕ ಶಿಕ್ಷಕ ರಾಘವನ್, ತಾಲ್ಲೂಕಿನ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin