ವಿದ್ಯಾರ್ಥಿಗಳ ಬಾಳು ಬೆಳಗಿಸಿದ ಸಜ್ಜಲಗುಡ್ಡದ ಶರಣಮ್ಮ ತಾಯಿ

Spread the love

10
ಇಳಕಲ್,ಫೆ.15- ಗ್ರಾಮೀಣ ಪ್ರದೇಶದ ರೈತರ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳಬಾರದು ಎಂಬ ಕಳಕಳಿಯಿಂದ ಪೂಜ್ಯ ಶರಣಮ್ಮ ತಾಯಿ ಹಾಗೂ ಸಂಗಣ್ಣ ಮುತ್ಯಾ ಗುಡಿಯವರ ಪ್ರಯತ್ನದ ಫಲವಾಗಿ 50 ವರ್ಷಗಳ ಹಿಂದೆ ಆರಂಭವಾದ ಸಜ್ಜಲಗುಡ್ಡದ ಪೂಜ್ಯ ಶರಣಮ್ಮ ತಾಯಿ ಸರ್ಕಾರಿ ಪ್ರೌಢಶಾಲೆ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿಸಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಸಜ್ಜಲಗುಡ್ಡದಲ್ಲಿ ಪೂಜ್ಯ ಶರಣಮ್ಮ ತಾಯಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. 1966ರಲ್ಲಿ 5 ಸರ್ಕಾರಿ ಪ್ರೌಢಶಾಲೆಗಳನ್ನು ಅಂದಿನ ಶಿಕ್ಷಣ ಮಂತ್ರಿ ಎಸ್.ಆರ್. ಕಂಠಿ ಅವರು ಕಟ್ಟಡ ನಿರ್ಮಾಣಕ್ಕೆ ತಗಲುವ ಅನುದಾನದೊಂದಿಗೆ ಮಂಜೂರು ಮಾಡಿದ್ದರು. ಅದರಲ್ಲಿ ಹುನಗುಂದ ತಾಲ್ಲೂಕಿನ 4 ಪ್ರೌಢಶಾಲೆಗಳು ಸೇರಿ ಸಜ್ಜಲಗುಡ್ಡವೂ ಒಂದಾಗಿತ್ತು. ಕಂಠಿ ಅವರಿಗೆ ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಇದ್ದಂತಹ ದೂರದೃಷ್ಠಿ ಎಂತಹದ್ದು ಎಂಬುದು ತಿಳಿಯುತ್ತದೆ ಎಂದು ಸ್ಮರಿಸಿದರು.ಲಿಂಗಸೂರು ಶಾಸಕ ಮಾನಪ್ಪ ವಜ್ಜಲ ಮಾತನಾಡಿ, ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ ಕಾಲೇಜಿನವರೆಗೆ ಅನೇಕ ಬೋಧಕ ಹುದ್ದೆಗಳು ಖಾಲಿ ಇವೆ.

ಹೀಗಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ? ಸಚಿವರಿಗೆ ಈ ಬಗ್ಗೆ ಅನೇಕ ಸಲ ವಿನಂತಿಸಿದರೂ ಪ್ರಯೋಜನ ಆಗಿಲ್ಲ.ಸುವರ್ಣ ಸಂಭ್ರಮದಲ್ಲಿರುವ ಈ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಹಾಗೂ ಸುವರ್ಣ ಭವನ ನಿರ್ಮಿಸಲು ಅನುದಾನ ಒದಗಿಸುವುದಾಗಿ ಹೇಳಿದರು.ಸಾನ್ನಿಧ್ಯವನ್ನು ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ವಹಿಸಿದ್ದರು. ಗುಡದೂರಿನ ನೀಲಕಂಠಯ್ಯ ತಾತನವರು ಹಾಗೂ ಸಜ್ಜಲಗುಡ್ಡದ ಶರಣಾಶ್ರಮದ ದೊಡ್ಡಬಸವಾರ್ಯ ತಾತನವರು ನೇತೃತ್ವ ವಹಿಸಿದ್ದರು. ಸುವರ್ಣ ಭವನದ ಶಿಲಾನ್ಯಾಸ ಸಜ್ಜಲ ತರಂಗ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಆರ್‍ಎಂಎಸ್‍ಎ ಅನುದಾನದಲ್ಲಿ ನಿರ್ಮಿಸಲಾದ ಪೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ರಾಯಚೂರು ಸಂಸದ ಬಿ.ವಿ. ನಾಯಕ್ ನೆರವೇರಿಸಿದರು.ಮೇಲೆ ದೊಡ್ಡಬಸಪ್ಪ ದಂಡಿನ, ದೊಡ್ಡನಗೌಡ ಚಳಗೇರಿ, ಗಿರಿರಾಜ ಹೊಸಮನಿ, ಸಂಗನಗೌಡ ಹಿರೇಗೌಡ್ರ, ವೀರನಗೌಡ ಪಾಟೀಲ, ಪ್ರಾಚಾರ್ಯ ಎಸ್.ಡಿ. ಬ್ಯಾಕೋಡ ಉಪಸ್ಥಿತರಿದ್ದರು

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin