ವಿದ್ಯಾರ್ಥಿನಿ ಕಿಡ್ನಾಪ್ ಆಗಿದ್ದು ಸುಳ್ಳು
ಬೆಂಗಳೂರು, ಏ.21- ಪಿಯುಸಿ ವಿದ್ಯಾರ್ಥಿನಿ ಅಪಹರಣ ಸುಳ್ಳು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಕಿಡ್ನಾಪ್ ಪ್ರಕರಣದಲ್ಲಿ ವಿದ್ಯಾರ್ಥಿನಿ ಯಾವ ಕಾರಣಕ್ಕೆ ಸುಳ್ಳು ಹೇಳುತ್ತಿದ್ದಾಳೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ. ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿ ಸಿಇಟಿ ತರಬೇತಿಗೆ ಹೋಗುತ್ತಿದ್ದು, ತನ್ನ ಅಪಹರಣ ನಡೆದಿತ್ತು. ತಪ್ಪಿಸಿಕೊಂಡು ಬಂದೆ ಎಂದು ಸುಳ್ಳು ಹೇಳುತ್ತಿರುವುದು ಈವರೆಗೆ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಏ.17ರಂದು ಮಧ್ಯಾಹ್ನ ವಿದ್ಯಾರ್ಥಿನಿ ಅಪಹರಣ ನಡೆದಿದೆ ಎನ್ನಲಾಗಿದ್ದು, ಏ.19ರಂದು ಆಕೆಯ ತಾಯಿ ಬಸವನಗುಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಬಸವನಗುಡಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >