ವಿಧಾನಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸಂಸದೀಯ ನಡವಳಿಕೆಗೆ ಪಕ್ಷ ಬೇಧ ಮರೆತು ಮೆಚ್ಚುಗೆ

Spread the love

Session-Assembly

ಬೆಂಗಳೂರು, ಮಾ.28- ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಂಸದೀಯ ನಡವಳಿಕೆ ಮೇಲಿನ ಬದ್ಧತೆಗೆ ವಿಧಾನಸಭೆಯಲ್ಲಿಂದು ಪಕ್ಷ ಬೇಧ ಮರೆತು ಮೆಚ್ಚುಗೆಯ ಮಾತುಗಳು ಕೇಳಿ ಬಂದವು. 2017 -18ನೆ ಸಾಲಿನ ಬಜೆಟ್ ಮೇಲೆ ನಿರಂತರವಾಗಿ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವಾಗ ಉಪಚುನಾವಣೆ ವಿಷಯ ಪ್ರಸ್ತಾಪವಾಯಿತು. ನಿನ್ನೆ ಸಂಪುಟದ ಸಚಿವರು ವಿಧಾನಸಭೆಯ ಕಲಾಪ ಬಿಟ್ಟು ಉಪ ಚುನಾವಣೆಯ ಪ್ರಚಾರಕ್ಕೆ ಹೋಗಿದ್ದರು ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತ ಪಡಿಸಿದರು. ಅದಕ್ಕೆ ಪ್ರತ್ಯುತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ನಿಮ್ಮ ಪಕ್ಷದ ಶೋಭಾ ಕರಂದ್ಲಾಜೆ ಒಂದು ದಿನವೂ ಸಂಸತ್ ಅಧಿವೇಶನಕ್ಕೆ ಹೋಗಿಲ್ಲ. ಯಡಿಯೂರಪ್ಪ ಕೂಡ ಅಧಿವೇಶನಕ್ಕೆ ಹೋಗದೆ ಉಪಚುನಾವಣೆ ಪ್ರಚಾರದಲ್ಲೇ ಭಾಗಿಯಾಗಿಲ್ವೆ ಎಂದು ಛೇಡಿಸಿದರು. ನೀವು ಅವರನ್ನು ಹೋಗಿ ಕೇಳಿ ಎಂದು ಬಿಜೆಪಿ ಶಾಸಕರು ಕೂಗಿ ಹೇಳಿದರು.

ನಮ್ಮ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಇನ್ನೂ ಉಪಚುನಾವಣೆಯ ಪ್ರಚಾರಕ್ಕೆ ಬಂದಿಲ್ಲ. ಸಂಸತ್ ಅಧಿವೇಶನದಲ್ಲೇ ಭಾಗಿಯಾಗಿದ್ದಾರೆ ನಿಮಗೆ ಗೋತ್ತಾ ಎಂದು ಸಿಎಂ ಹೇಳಿದರು. ಆಗ ಮಧ್ಯ ಪ್ರವೇಶಿಸಿದ ಸಚಿವ ರಮೇಶ್ ಕುಮಾರ್, ನಾವು ಖರ್ಗೆಯವರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಸಂಸದೀಯ ವ್ಯವಸ್ಥೆಯಲ್ಲಿ ತಾಳ್ಮೆಯಿಂದ ಕುಳಿತು ಕೇಳಿ ತಿಳಿದುಕೊಳ್ಳುವುದು, ನೋಡಿ ಕಲಿಯುವುದು ಬಹಳಷ್ಟಿದೆ. ಖರ್ಗೆ ಅವರು ಅಷ್ಟು ಹಿರಿಯರಾದರೂ ಇಂದಿಗೂ ಸಂಸತ್ ಅಧಿವೇಶನದಲ್ಲಿ ನಿರಂತರವಾಗಿ ಕುಳಿತು ಆಲಿಸುತ್ತಾರೆ. ಅವರ ಬದ್ಧತೆ ನಮಗೂ ಬರಬೇಕು. ಇಲ್ಲಿ ಬಂದು ಸಹಿ ಹಾಕಿ ಹೋಗಿ ಬಿಡುತ್ತೇವೆ. ಅದನ್ನು ಬಿಡಬೇಕು ಎಂದರು.

ಈ ಹಂತದಲ್ಲಿ ಎದ್ದು ನಿಂತ ಜಗದೀಶ್ ಶೆಟ್ಟರ್ ಅವರು, ನಾನು ವಿಧಾನಸಭಾಧ್ಯಕ್ಷನಾಗಿದ್ದಾಗ ಖರ್ಗೆ ಅವರ ಪಾಲ್ಗೊಳುವಿಕೆ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದ್ದೇನೆ, ಸ್ಪೀಕರ್ ಆಗಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದೇನೆ. ಅವರ ನಡವಳಿಕೆ ಮಾದರಿ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin