ವಿಧಾನಸೌಧದಲ್ಲಿ ಹಾವು ಪ್ರತ್ಯಕ್ಷ…! (Video)

ಬೆಂಗಳೂರು. ಫೆ.02 : ಇಂದು ಬೆಳಿಗ್ಗೆ ವಿಧಾನಸೌಧದ ಪೂರ್ವ ದ್ವಾರದ ಬಳಿಯ ಹುಲ್ಲು ಹಾಸಿನ ಮೇಲೆ ಹಾವೊಂದು ಕಾಣಿಸಿಕೊಂಡು ಗಮನ ಸೆಳೆಯಿತು. ಇಂದು ವಿಧಾನ ಸೌಧದ ಮುಂಬಾಗದಲ್ಲಿ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತಿದೆ. ಅದಕ್ಕೂ ಮುನ್ನವೆ ಕಂಡು ಬಂಡ ಹಾವನ್ನು ವಿಡಿಯೋ ಚಿತ್ರೀಕರಿಸಿದರೆ ಮತ್ತೆ ಕೆಲವರು ಫೋಟೋ ತೆಗೆದರು. ಇನ್ನೂ ಕೆಲವರು ತಮಗೆ ತೋಚಿದಂತಾ ಕಥೆ ಕಟ್ಟತೊಡಗಿದರು. ಕಾಗೆ ಆಯ್ತು, ಗೂಬೆ ಆಯ್ತು, ಈಗ ಹಾವಿನ ಸರದಿ ಎಂದು ಮಾತನಾಡಿಕೊಳ್ಳುತ್ತಿದ್ದರು.   ಈ ಹಿಂದೆ ಸಿಎಂ ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆಯೊಂದು ಕುಳಿತುಕೊಂಡಿತ್ತು. ಎರಡು ವಾರದ ಹಿಂದೆ ಕೇರಳದ ಮಂಜೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು.

ಈ ಮಧ್ಯೆ ಗೂಬೆಯೂ ಕಾಣಿಸಿಕೊಂಡಿತ್ತು. ಈ ವಿಚಾರದ ಬಗ್ಗೆ ವಿಧಾನಸೌಧದ ಸಿಬ್ಬಂದಿ ಹಾಗೂ ಸಾರ್ವಜನಿಕರು ನಾನಾ ರೀತಿ ಮಾತನಾಡುತ್ತಿದ್ದರು. ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವಿನ ಬಗ್ಗೆಯೂ ತಲೆಕ್ಕೆಡಿಸಿಕೊಳ್ಳುವುದಿಲ್ಲ ಎಂದೆನಿಸುತ್ತೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin