ವಿಧಾನಸೌಧದಲ್ಲಿ ಇಂದೇ ನಡೀತು ಆಯುಧ ಪೂಜೆ
ಬೆಂಗಳೂರು, ಸೆ.28-ನಾಳೆ ಆಯುಧಪೂಜೆ ಹಾಗೂ ಸರಣಿ ರಜೆ ಇರುವುದರಿಂದ ಆಡಳಿತ ಕೇಂದ್ರ ಶಕ್ತಿಸೌಧ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿಂದು ಇಂದು ಆಯುಧಪೂಜೆ ವಿಜೃಂಭಣೆಯಿಂದ ನಡೆಯಿತು. ಎಲ್ಲಾ ಕಚೇರಿಗಳಲ್ಲಿ ನೌಕರ ವರ್ಗದವರು ಆಯುಧಪೂಜೆ ಮಾಡುತ್ತಿದ್ದರು. ಮುಖ್ಯಮಂತ್ರಿಗಳ ಕಚೇರಿ, ಸಚಿವರ ಕಚೇರಿಗಳು ಮುಖ್ಯ ಕಾರ್ಯದರ್ಶಿ, ಸ್ಪೀಕರ್, ಸಭಾಪತಿ ಕೊಠಡಿ ಸೇರಿದಂತೆ ಎಲ್ಲಾ ಕಚೇರಿಗಳು ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದವು. ನಾಳೆಯಿಂದ ಸರಣಿ ರಜೆಗಳಿರುವುದರಿಂದ ಸಚಿವಾಲಯದ ನೌಕರರೆಲ್ಲರೂ ಬಹುತೇಕ ಇಂದೇ ಪೂಜೆ, ಪರಸ್ಪರ ಶುಭಾಶಯ ವಿನಿಮಯ, ಸಿಹಿ ಹಂಚಿಕೆ ಮಾಡಿಕೊಳ್ಳುತ್ತಿದ್ದುದು ಕಂಡುಬಂತು.