ವಿನೋದ್ ಖನ್ನಾಗೆ ಅಂಗಾಂಗ ದಾನ ಮಾಡಲು ನಾನು ರೆಡಿ ಎಂದ ಇರ್ಫಾನ್ ಖಾನ್

Irfan-Khan--010

ಬೆಂಗಳೂರು, ಏ.7-ಗುರುತಿಸಲಾಗದಷ್ಟು ತೀವ್ರ ಅಸ್ವಸ್ಥರಾಗಿ ಕೃಶರಾಗಿರುವ ಹಿಂದಿ ಚಿತ್ರರಂಗದ ಖ್ಯಾತ ನಟ ವಿನೋದ್ ಖನ್ನಾರ ಆಸ್ಪತ್ರೆ ದೃಶ್ಯಗಳನ್ನು ನೋಡಿ ಬಾಲಿವುಡ್ ದಿಗ್ಭ್ರಮೆಗೆ ಒಳಗಾಗಿದೆ.  ವಿನೋದ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಶಂಕೆ ವ್ಯಕ್ತಪಡಿಸಿ ವರದಿ ಮತ್ತು ರೋಗಗ್ರಸ್ಥ ನಟನ ಚಿತ್ರಗಳು ಪ್ರಕಟವಾಗುತ್ತಿದ್ದಂತೆ ಅನೇಕ ತಾರೆಯರು ಆತಂಕಕ್ಕೆ ಒಳಗಾಗಿದ್ದಾರೆ.  ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದ ಹ್ಯಾಂಡ್‍ಸಮ್ ಹೀರೋ ಎಂದೇ ಸಿನಿಮಾ ರಸಿಕರ ಮನಗೆದ್ದಿದ್ದ ಖನ್ನಾರ ದೇಹ ತೂಕ ಅರ್ಧದಷ್ಟು ಇಳಿದಿದೆ.

ವಯೋವೃದ್ಧನಂತೆ ಕಾಣುವ ಬಿಳಿಗಡ್ಡ, ಗುಳಿ ಬಿದ್ದ ಕೆನ್ನೆಗಳು, ಒಳಕ್ಕೆ ಇಳಿದ ಕಣ್ಣುಗಳು ವಿನೋದ್ ಸ್ಥಿತಿ ನೋಡಿ ಬಾಲಿವುಡ್ ಮಮ್ಮಲ ಮರುಗಿದೆ. ಖ್ಯಾತ ಬಾಲಿವುಡ್ ಮತ್ತು ಹಾಲಿವುಡ್ ನಟ ಇರ್ಫಾನ್ ಖಾನ್ ವಿನೋದ್ ಸ್ಥಿತಿಗೆ ದಿಗ್ಮೂಢರಾಗಿದ್ದಾರೆ. ಅಲ್ಲದೆ, ಅವರಿಗಾಗಿ ಅಗತ್ಯವಾದ ಅಂಗಾಂಗ ದಾನ ಮಾಡಲೂ ಸಿದ್ಧ ಎಂದು ಪ್ರಕಟಿಸಿ ಮಾನವೀಯತೆ ಮೆರೆದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin