ವಿಮಾನದಲ್ಲಿ ಘರ್ಷಣೆ ಮತ್ತು ಮಹಿಳೆ ಮೇಲೆ ಹಲ್ಲೆ ವಿಡಿಯೋ ವೈರಲ್ : ಉದ್ಯೋಗಿ ಸಸ್ಪೆಂಡ್
ವಾಷಿಂಗ್ಟನ್, ಏ.23-ವಿಮಾನವೊಂದರಲ್ಲಿ ನಡೆದ ಘರ್ಷಣೆ ಮತ್ತು ಮಹಿಳೆ ಮೇಲೆ ಆಕ್ರಮಣಕಾರಿ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡ ನಂತರ, ಅಮೆರಿಕನ್ ಏರ್ಲೈನ್ಸ್ ತನ್ನ ಉದ್ಯೋಗಿಯನ್ನು ಅಮಾನತುಗೊಳಿಸಿದೆ. ವಿಮಾನದ ಉದ್ಯೋಗಿಯು ಘರ್ಷಣೆ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಂದ ಸ್ಟ್ರೋಲರ್ (ಪುಟ್ಟ ಮಕ್ಕಳನ್ನು ಕರೆದೊಯ್ಯುವ ಸಣ್ಣ ಗಾಡಿ) ಎಳೆದುಕೊಂಡು ಆಕೆಗೆ ಅದರಿಂದ ಹೊಡೆದನು.
ಈ ಆಕ್ರಮಣದಿಂದ ಸ್ಟ್ರೋಲರ್ನಲ್ಲಿದ್ದ ಶಿಶು ಅದೃಷ್ಟವಶಾತ್ ಪಾರಾಗಿದೆ. ಈ ದೃಶ್ಯವನ್ನು ಸುರೈನ್ ಅಡ್ಯಂತಾಯ ಎಂಬುವರು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದರು. ಘಟನೆ ಬಗ್ಗೆ ವಿಮಾನ ಸಂಸ್ಥೆ ಕ್ಷಮೆ ಕೋರಿದೆ.
< Eesanje News 24/7 ನ್ಯೂಸ್ ಆ್ಯಪ್ >