ವಿವಾದದಲ್ಲಿ ಸಿಲುಕಿದ ಸಿಂಧು, ಶ್ರೀಕಾಂತ್

srikant

ಹೈದರಾಬಾದ್, ಸೆ.4-ಬ್ರೆಜಿಲ್‍ನಲ್ಲಿ ನಡೆದ ರಿಯೋ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಿ.ವಿ ಸಿಂಧು ಹಾಗೂ ಬ್ಯಾಡ್ಮಿಂಟನ್ ಆಟಗಾರ ಕಿಡಾಂಬಿ ಶ್ರೀಕಾಂತ್ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ರಿಯೋ ಒಲಿಂಪಿಕ್ಸ್‍ನಲ್ಲಿ ಭಾಗಿಯಾಗಿದ್ದ ಭಾರತೀಯ ಕ್ರೀಡಾಪಟುಗಳು ಲೀ ನಿಂಗ್ ಕಂಪನಿ ನೀಡಿದ್ದ ಉಡುಗೆ ತೊಡಬೇಕು ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಪಿ.ವಿ ಸಿಂಧು ಹಾಗೂ ಕಿಡಾಂಬಿ ಶ್ರೀಕಾಂತ್ ಈ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.  ಪಿ.ವಿ ಸಿಂಧು ಹಾಗೂ ಕಿಡಾಂಬಿ ಶ್ರೀಕಾಂತ್ ಪಂದ್ಯದ ವೇಳೆ ಯೋನೆಕ್ಸ್ ಕಂಪನಿಯ ಉಡುಗೆ ತೊಟ್ಟಿದ್ದಾರೆ ಎಂದು ಲೀ ನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಹೇಂದರ್ ಕಪೂರ್ ಆರೋಪಿಸಿದ್ದಾರೆ. ಭಾರತೀಯ ಒಲಂಪಿಕ್ಸ್ ಸಂಸ್ಥೆಯೊಂದಿಗೆ ಲೀ ನಿಂಗ್ ಕಂಪನಿ 3 ಕೋಟಿ ರೂ.ಗಳಿಗೆ ಒಪ್ಪಂದ ಮಾಡಿಕೊಂಡಿತ್ತು.

► Follow us on –  Facebook / Twitter  / Google+

Sri Raghav

Admin