ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

7

ಗದಗ,ಸೆ.29- ಹಿಂದುಳಿದ ಶೋಷಿತ ಹಾಗೂ ಬಡ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಬಹುದಿನಗಳಿಂದ ಈಡೇರದ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಸಬೇಕೆಂದು ಒತ್ತಾಯಿಸಿ ನಗರಸಭೈ ಅಧ್ಯಕ್ಷರಿಗೆ ಮನವಿ ನೀಡಿದರು.ಗದಗ-ಬೆಟಗೇರಿ ನಗರಸಭೆಯ ನೂತನ ಅಧ್ಯಕ್ಷ ಪೀರಸಾಬ ಕೌತಾಳ ಮನವಿ ಸ್ವೀಕರಿಸಿ ಮಾತನಾಡಿ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ ಕೂಡ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಲ್ಲೊಂದಾಗಿದ್ದು ಈ ಸಮಾಜದ ಅಭಿವೃದ್ದಿ ಹಾಗೂ ಬಹುದಿನಗಳ ಅಪೇಕ್ಷಿತ ಬೇಡಿಕೆಗಳು ಈಡೇರಿಸಿ ನಗರಸಭೆಯಿಂದ ಅಗತ್ಯ ಸೌಲಭ್ಯಗಳು ಒದಗಿಸಲು ಕೂಡಲೇ ಕ್ರಮಕೈಗೊಳ್ಳುವು ದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷ ಶ್ರೀನಿವಾಸ ಹುಯಿಲ ಗೋಳ, ಜಿಲ್ಲಾ ಶ್ರೀ ಸಂತಸೇನಾ ಮಹಾರಾಜ ನಾಬಿಕ್ ಮರಾಠ ವಿವಿದೊದ್ದೇಶಗಳ ಸಂಘದ ಜಿಲ್ಲಾ ಅಧ್ಯಕ್ಷ ವಿಷ್ಣು ಮಧುಕರ ಮಾನೆ, ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಕೃಷ್ಣಾ .ಎಚ್ ಹಡಪದ, ಸವಿತಾ ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ, ರಾಜು ಮಾನೆ, ಬಾಲರಾಜ ಕೊಟೆಕಲ್ಲ, ರಮೇಶ ರಾಂಪೂರ, ಪರಶುರಾಮ ಕೋಟೆಕಲ್, ಜಂಬಣ್ಣ ಕಡಮೂರ, ಶಿವಾಜಿ ಮಾನೆ, ಅರುಣ ಮಾನೆ, ರಾಜು ಮಾನೆ, ಅಶೋಕ ಮಾನೆ, ರಾಮ ಮಾನೆ, ಬಾಳು

ಮನೆ, ಸಂಜು ಮಾನೆ, ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಕೋಟೆಕಲ್, ಸಂಘಟನಾ ಕಾರ್ಯದರ್ಶಿ ಶಂಕರ ಮಾನೆ, ಪ್ರಕಾಶ ಮಾನೆ, ಮಾಧು ಮಾನೆ, ಮಾಧು ಮಾನೆ, ರಾಜು ರಾಮ ಮಾನೆ, ಮಂಜುನಾಥ ಮಾನೆ, ಸೋಮನಾಥ ಮಾನೆ, ಅಕ್ಷಯ ಮಾನೆ, ವಿಶ್ವಾ ಮಾನೆ, ಶಿವಾನಂದ ಮಾನೆ, ಪ್ರವೀಣ ಕಾಳೆ, ವಿಕಾಸ ಕಾಳೆ, ಆದರ್ಶ ಮಾನೆ, ಅರುಣ ರಾಂಪೂರ, ಸುರೇಶ ಬೂದೂರ, ಶ್ರೀನಿವಾಸ ಶಿಕಾರಿಪೂರ, ಕಿರಣ ರಾಂಪೂರ, ಸಚಿನ ಮಾನೆ, ರಾಹುಲ್ ಮಾನೆ, ಮನೋಜ ಕೊಟೆಕಲ್ಲ, ಪರಶುರಾಮ ರಾಂಪೂರ, ತುಕಾರಾಮ ಮಾನೆ ಹಾಗೂ ಇತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin