ವಿವಿಧ ಸಂಘಟನೆಗಳಿಂದ ರಸ್ತೆ ತಡೆ

Spread the love

anavalli

ಮಳವಳ್ಳಿ, ಸೆ.8-ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಪಟ್ಟಣ ಹಾಗೂ ಸುತ್ತಮುತ್ತ ರಸ್ತೆ ತಡೆದು ವಿವಿಧ ಸಂಘಟನೆಗಳು ಪ್ರತಿಭಟನೆಗಳು ನಡೆಸಿದವು.ಪಟ್ಟಣದ ಅನಂತ್‍ರಾಮನ್ ವೃತ್ತದ ಬಳಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ರಸ್ತೆ ತಡೆದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವ ಎ.ಬಿ.ಪಾಟೀಲ್ ವಿರುದ್ದ ಘೋಷಣೆಗಳನ್ನು ಕೂಗಿದರು.  ಜಿಲ್ಲಾ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀನಿವಾಸ್, ಕಾರ್ತಿಕ್, ಮಂಜು, ನಾಗರಾಜು, ಚಂದ್ರು ಮತ್ತಿತರರು ಇದ್ದರು.

ಜೆಡಿಎಸ್ ಪಕ್ಷದ ಕಾರ್ಯಕರ್ತರು ಅಂಚೆ ಕಚೇರಿ ಬಳಿ ನಡೆದ ಧರಣಿಯಲ್ಲಿ ಮಾಜಿ ಶಾಸಕ ಡಾ.ಅನ್ನದಾನಿ, ಜಿ.ಪಂ.ಸದಸ್ಯ ರವಿ, ಪುರಸಭೆಯ ಮಾಜಿ ಅಧ್ಯಕ್ಷ ದೊಡ್ಡಯ್ಯ ಪಾಲ್ಗೊಂಡಿದ್ದರು.ಪುಟಾಣಿಗಳಿಂದ ರಸ್ತೆ ತಡೆ: ಮಳವಳ್ಳಿ ತಾಲೂಕಿನ ಆಲದಹಳ್ಳಿ ಬಳಿ ಗ್ರಾಮದ ಮಕ್ಕಳು ಒಗ್ಗೂಡಿ ರಸ್ತೆ ತಡೆ ಮಾಡಿ ಎಲ್ಲರ ಹುಬ್ಬೇರಿಸಿದರು.  ಬೆಳಗ್ಗೆ 10 ಗಂಟೆಗೆ ರಸ್ತೆಗಿಳಿದ ಮಕ್ಕಳು ಮರದ ಸಣ್ಣ ಸಣ್ಣ ರಂಬೆಗಳನ್ನು ಮಳವಳ್ಳಿ ಮಂಡ್ಯ ರಸ್ತೆಗೆ ಅಡ್ಡಲಾಗಿ ಹಾಕಿ ಕಾವೇರಿ ನಮ್ಮದು ಬಿಡುವುದಿಲ್ಲ ಎಂಬ ಘೋಷಣೆ ಕೂಗಿದರು.ನಿನ್ನೆ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಟಿ.ಕೆ.ಹಳ್ಳಿ ಬಳಿಯ ಬೆಂಗಳೂರು ಜಲಮಂಡಳಿ ಕಾರ್ಯಾಗಾರಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಕಾವೇರಿ ನದಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವ ಕುರಿತು ಯಾವುದೇ ಧ್ವನಿ ಎತ್ತದ ಬೆಂಗಳೂರಿನವರ ಧೋರಣೆ ಖಂಡಿಸಿ ಬಿ ಜೆ ಪಿ ಕಾರ್ಯಕರ್ತರು ಜಲಮಂಡಳಿಗೆ ಮುತ್ತಿಗೆ ಹಾಕಿ ನೀರು ತಡೆಯುವ ಯತ್ನಕ್ಕೆ ಮುಂದಾದಾಗ ಮಂಡಳಿಯ ಮುಖ್ಯಧ್ವಾರದ ಬಳಿ ಕೆಲ ಕಾಲ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಮುಖಂಡರಾದ ಆಶೋಕ್‍ಕುಮಾರ್, ಕೆ.ಸಿ.ನಾಗೇಗೌಡ, ಮುದ್ದುಮಲ್ಲು, ಶಿವಲಿಂಗೇಗೌಡ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin