ವಿಶ್ವಕರ್ಮ ಸೃಷ್ಠಿಕರ್ತ

vishwa--karma

ವೇದಕಾಲದಲ್ಲಿ ಇಂದ್ರ, ವರುಣ, ಅಗ್ನಿ, ಪೃಥ್ವಿ ಹೀಗೆ ಹಲವು ದೇವರನ್ನು ಪೂಜಿಸುತ್ತಾ ಇದ್ದರು. ಆದರೆ ಇವರು ಯಾರೊ ಈ ಪ್ರಪಂಚವನ್ನು ಸೃಷ್ಠಿಸಿದ ದೇವರಲ್ಲ. ಹಾಗಾದರೆ ಈ ಪ್ರಪಂಚವನ್ನು ಸೃಷ್ಠಿಸಿದ ದೇವರು ಯಾರು ? ಯಾರಿಗೂ ಗೊತ್ತಿರಲಿಲ್ಲ. ವೇದಕಾಲದ ಅರಸ ಮಹಾಶಿಲ್ಪಿ ಭುವನ, ಇವನ ಮಗ ಮಹಾಶಿಲ್ಪಿ ಭೌವನ. ವಿಶ್ವಕರ್ಮ ದೇವರನ್ನು ಕಂಡದ್ದರಿಂದ ಮಹರ್ಷಿ ಭೌವನನಿಗೆ ವಿಶ್ವಕರ್ಮ ಬ್ರಾಹ್ಮಣ ಎಂಬ ಹೆಸರು ಬಂತು. ವಿಶ್ವಕರ್ಮನಿಗೆ ವಿಶ್ವಬ್ರಹ್ಮ ಎಂಬ ಹೆಸರೂ ಇದೆ. ಪ್ರಪಂಚದ ತಂದೆ ವಿಶ್ವಕರ್ಮ. ಎಲ್ಲ ದೇವರುಗಳನ್ನು ಸೃಷ್ಠಿಸಿ ಅವರಿಗೆಲ್ಲ ಹೆಸರಿಟ್ಟವನು ವಿಶ್ವಕರ್ಮ. ಅನೇಕ ದೇವರುಗಳಾಗಿ ಕಂಡರು ಅವೆಲ್ಲವೂ ಒಂದೆ ಅವನೇ ವಿಶ್ವಕರ್ಮ.
ವಿಶ್ವಕರ್ಮ ದೇವತಾಖ್ಯಾನ ಕಥಾ ಪಾತ್ರಗಳಲ್ಲಿಯೇ ಅತ್ಯಂತ ಜಠಿಲ ಪಾತ್ರಗಳಲ್ಲೊಬ್ಬನು. ಬಹುಸಂಖ್ಯಾ ಪ್ರಾಚ್ಯ ಶಾಸ್ತ್ರಜ್ಞರು ವಿಶ್ವಕರ್ಮನ ಬಗೆಗೆ ವಿವಿಧ ಕೋನಗಳಿಂದ ಚರ್ಚಿಸಿದ್ದಾರೆ ಮತ್ತು ವಿಶ್ಲೇಷಿಸಿದ್ದಾರೆ. ವಿಶ್ವಕರ್ಮನ ವೀರಗಾಥೆ ಹಲವು ಸಂಕೀರ್ಣ ಮೂಲಗಳು ಒಂದಾಗಿ ಮಿಶ್ರಗೊಂಡು ಒಂದು ಕಗ್ಗಂಟು. ವಿಶ್ವಕರ್ಮನದ್ದು ವೈವಿಧ್ಯಪೂರ್ಣ ವಿಶಿಷ್ಠ ಪಾತ್ರ. ವಿಶ್ವಕರ್ಮನ ಬಗೆಗಿನ ವರ್ಣನೆ ವಿವರಣೆಗಳಲ್ಲಿ ಏಕಾಭಿಪ್ರಾಯವಿಲ್ಲ. ಆದರೂ ಆತನನ್ನು ವಿಶ್ವಸೃಷ್ಠಿಕರ್ತನೆಂದು, ದೇವಶ್ರೇಷ್ಠನೆಂದೂ ವರ್ಣಿಸಲಾಗಿದೆ.ವೇದಕಾಲದಲ್ಲಿ ಇಂದ್ರ, ವರುಣ, ಅಗ್ನಿ, ಪೃಥ್ವಿ ಹೀಗೆ ಹಲವು ದೇವರನ್ನು ಪೂಜಿಸುತ್ತಾ ಇದ್ದರು. ಆದರೆ ಇವರು ಯಾರೊ ಈ ಪ್ರಪಂಚವನ್ನು ಸೃಷ್ಠಿಸಿದ ದೇವರಲ್ಲ. ಹಾಗಾದರೆ ಈ ಪ್ರಪಂಚವನ್ನು ಸೃಷ್ಠಿಸಿದ ದೇವರು ಯಾರು ? ಯಾರಿಗೂ ಗೊತ್ತಿರಲಿಲ್ಲ. ವೇದಕಾಲದ ಅರಸ ಮಹಾಶಿಲ್ಪಿ ಭುವನ, ಇವನ ಮಗ ಮಹಾಶಿಲ್ಪಿ ಭೌವನ. ಇವನು ತಪಸ್ಸಿಗೆ ಕಾಡಿಗೆ ತೆರಳಿದ.

ಕಠಿಣ ತಪಸ್ಸು ಮಾಡಿದ. ದೇವರು ಇವನಿಗೆ ಪ್ರತ್ಯಕ್ಷವಾದ. ನಂತರ ಭೌವನನು ನಗರಕ್ಕೆ ಹಿಂತಿರುಗಿದ. ವೇದಕಾಲದಲ್ಲಿ ಋಷಿಗಳದ್ದೇ ದೊಡ್ಡ ಸಂಘವಿತ್ತು. ಅದಕ್ಕೆ ಹೆಸರು ಋಷಿಮಹಾಮಂಡಲ. ಈ ಋಷಿ ಮಹಾಮಂಡಲದ ಋಷಿಗಳನ್ನು ಮಹರ್ಷಿ ಭೌವನನು ಆಮಂತ್ರಿಸಿದ. ದೇವರ ವಿಚಾರವನ್ನೆಲ್ಲ ಮಹರ್ಷಿ ಭೌವನ ಋಷಿಗಳಿಗೆ ಹೇಳಿದ. ವಿಶ್ವಕರ್ಮ ದೇವರ ವಿಚಾರ ಕೇಳಿ ಋಷಿಗಳಿಗೆಲ್ಲರಿಗೂ ಮಹಾ ಆನಂದವಾಯಿತು. ಅವರಿಗೆಲ್ಲ ಅಪಾರ ಶಾಂತಿ ಸಿಕ್ಕಿತು. ಮಹರ್ಷಿ ಭೌವನನ್ನು ಋಷಿ ಮಹಾಮಂಡಲದ ಅಧ್ಯಕ್ಷ ಸ್ಥಾನದಲ್ಲಿ ಕುಳ್ಳರಿಸಿದರು. ಮಹರ್ಷಿ ಭೌವನನನ್ನು ಸನ್ಮಾನಿಸಿ ಭೌವನ ವಿಶ್ವಕರ್ಮ ಎಂದು ಜಯಕಾರ ಮಾಡಿದರು. ವಿಶ್ವಕರ್ಮ ದೇವರನ್ನು ಕಂಡದ್ದರಿಂದ ಮಹರ್ಷಿ ಭೌವನನಿಗೆ ವಿಶ್ವಕರ್ಮ ಬ್ರಾಹ್ಮಣ ಎಂಬ ಹೆಸರು ಬಂತು. ವಿಶ್ವಕರ್ಮನಿಗೆ ವಿಶ್ವಬ್ರಹ್ಮ ಎಂಬ ಹೆಸರೂ ಇದೆ. ಆದ್ದರಿಂದ ಈ ಕುಲಕ್ಕೆ ವಿಶ್ವಬ್ರಾಹ್ಮಣ ಕುಲ ವಿಶ್ವಕರ್ಮ ಕುಲ ಎಂಬ ಹೆಸರುಗಳು ಬಂದಿವೆ.

ವಿಶ್ವಕರ್ಮನು ಈ ಪ್ರಪಂಚವನ್ನು, ಎಲ್ಲ ದೇವರುಗಳನ್ನು, ಜೀವಿಗಳನ್ನು ಸೃಷ್ಠಿಸಿ ಅವುಗಳೊಳಗೆ ಪ್ರವೇಶಿಸಿದ. ವಿಶ್ವಕರ್ಮನು ಅವುಗಳೊಳಗೆಲ್ಲ ಕರ್ಮಚೈತ್ಯವಾಗಿ ಉಳಿದ. ಸೂರ್ಯಚಂದ್ರರ ತಿರುಗಾಟ, ಗಾಳಿಯ ಸಂಚಾರ, ಗಿಡಮರಗಳು ಬೆಳೆಯುವುದು, ನಮ್ಮ ಉಸಿರಾಟ ಎಲ್ಲವೂ ಕೆಲಸ. ಇದನ್ನು ಕರ್ಮ ಎನ್ನುವರು. ಈ ಪ್ರಪಂಚದ ಶಕ್ತಿ ಚೈತನ್ಯವೇ ಕರ್ಮ. ಕರ್ಮವಿಲ್ಲದಲ್ಲಿ ಜೀವ, ಚೈತನ್ಯವಿಲ್ಲ. ಹೀಗೆ ಪ್ರಪಂಚವೆಲ್ಲ ಕರ್ಮಚೈತನ್ಯವಾಗಿರುವ ಅವನು ಈ ಕರ್ಮಕ್ಕೆಲ್ಲ ಒಡೆಯ.ಪ್ರಪಂಚದ ತಂದೆ ಅವನು ವಿಶ್ವಕರ್ಮ. ಎಲ್ಲ ದೇವರುಗಳನ್ನು ಸೃಷ್ಠಿಸಿ ಅವರಿಗೆಲ್ಲ ಹೆಸರಿಟ್ಟವನು ವಿಶ್ವಕರ್ಮ. ಅನೇಕ ದೇವರುಗಳಾಗಿ ಕಂಡರು ಅವೆಲ್ಲವೂ ಒಂದೆ ಅವನೇ ವಿಶ್ವಕರ್ಮ.

ವೇದಗಳಲ್ಲಿ ವಿಶ್ವಕರ್ಮ :

ಋಗ್ವೇದದಲ್ಲಿ ವಿಶ್ವಕರ್ಮನನ್ನು ಎಲ್ಲ ಸೃಷ್ಠಿ ಪ್ರಕ್ರಿಯೆಗಳ ವ್ಯಕ್ತಿಯೆಂದು ಪ್ರಸ್ತಾಪಿಸಲಾಗಿದೆ. ಕೆಲವು ಸ್ತೋತ್ರಗಳಲ್ಲಿ ಆತನನ್ನು ಸೃಷ್ಠಿ ಕ್ರಿಯೆಗಾಗಿ ಹಲವು ರೀತಿಯ ತ್ಯಾಗಗಳನ್ನು ಮಾಡಿದವನೆಂದು ಕಡೆಗೆ ತನ್ನನ್ನೇ ಅರ್ಪಿಸಿಕೊಂಡವನೆಂದೂ ಸ್ತುತಿಸಲಾಗಿದೆ.ಪುರುಷ ಸೂಕ್ತದ ಮೊದಲ 2 ರಾಕ್ಕಿನಲ್ಲಿ : ವಿಶ್ವಕರ್ಮನನ್ನು ಯಾರು ಸಹಸ್ರ ಶರಸ್ಸುಗಳನ್ನು ಸಹಸ್ರ ಕಣ್ಣುಗಳನ್ನು ಸಹಸ್ರಬಾಹುಗಳನ್ನು ಉಳ್ಳವನಾಗಿದ್ದು ಈ ಪೃಥ್ವಿಗಿಂತಲೂ ಹತ್ತು ಬೆರಳುಗಳಷ್ಟು ಉನ್ನತನಾಗಿದ್ದಾನೊ ಆ ಪುರುಷನೆಂದು ವರ್ಣಿಸಲಾಗಿದೆ. ಅದೇ ಆತನನ್ನು ಪ್ರಜಾಪತಿ, ಹಿರಣ್ಯಬರ್ಘ, ವಾಚಸ್ಪತಿ, ತ್ವಷ್ಟ್ಯ, ವಿರಾಟ್ ಎಂದು ಪರಿಗಣಿಸಿ ವರ್ಣಿಸಲಾಗಿದೆ. ಹೀಗೆ ವೇದಗಳ ಕಾಲದಲ್ಲಿ ವಿಶ್ವಕರ್ಮನು ದೇವತೆಗಳಿಗೆ ಕಾರ್ಯಾಧಾರಿತ ನಾಮಾಂಕಿತಗಳನ್ನು ನೀಡಿ ಅತಿಶ್ರದ್ದೆಯಿಂದ ಗೌರವಿಸಲ್ಪಟ್ಟು ಅತ್ಯನ್ನತ ಸ್ಥಾನವನ್ನು ಪಡೆದಿದ್ದಾನೆ.
ತೈತ್ತಿರೀಯ ಸಂಹಿತೆಯು : ಬ್ರಹ್ಮನನ್ನು ವಿಶ್ವಕರ್ಮ ಎಂದು ಪರಿಗಣಿಸುತ್ತದೆ.

ಸ್ಕಂದ ಪುರಾಣವು : ಗಾಯತ್ರಿಯು ವಿಶ್ವಕರ್ಮನಲ್ಲದೆ ಬೇರಲ್ಲ ಎಂದಿದೆ. ನಾವು ವೇದ ಮತ್ತು ಬ್ರಾಹ್ಮಣಗಳ ಕಾಲದಿಂದ ಇತಿಹಾಸ ಮತ್ತು ಪುರಾಣಗಳ ಕಾಲಕ್ಕೆ ಬಂದರೆ ವಿಶ್ವಕರ್ಮನನ್ನು ದೇವತೆಗಳ ಸ್ಥಪತಿ ಎಂದು ವರ್ಣಿಸಿರುವದನ್ನು ಅಳಿಯುತ್ತೇವೆ. ರಾಮಾಯಣ ಕಥಾನಕದಲ್ಲಿ ವಿಶ್ವಕರ್ಮನು ರಾಕ್ಷಸರಿಗಾಗಿ ಲಂಕಾಪಟ್ಟಣವನ್ನು ನಿರ್ಮಿಸಿಕೊಟ್ಟನೆಂದು, ಭಾರತದಿಂದ ಲಂಕೆಗೆ (ಸಿಂಹದ್ವೀಪಕ್ಕೆ) ರಾಮಸೇತು ನಿರ್ಮಾಣಕ್ಕಾಗಿ ನಳನೆಂಬ ವಾನರನನ್ನು ಸೃಷ್ಠಿಸಿದನೆಂದೂ ಉಲ್ಲೇಖವಿದೆ ಮಹಾಭಾರತ ಕಥಾ ನಕದಲ್ಲಿ ಕಲೆಗಳ ಚಕ್ರವರ್ತಿ ಎಂದೂ ದ್ವಾರಕಾನಗರವನ್ನು ನಿರ್ಮಿಸಿದವನೆಂದೂ ವರ್ಣಿಸಲಾಗಿದೆ.ಕಾಲಾನುಕ್ರಮವಾಗಿ ಬ್ರಹ್ಮ ಶಬ್ದವು ವಿಶ್ವಕರ್ಮನೆಂದೇ ಬದಲುಗೊಳ್ಳುತ್ತಾ ಹೋಯಿತು ಏನೇ ಆದರೂ ವಿಶ್ವಕರ್ಮನು ಅತ್ಯುನ್ನತ ಸ್ಥಾನಸ್ಥನೆಂದೂ ಆರಾಧ್ಯದೈವನೆಂದೂ ಪರಿಗಣಿತನಾದನು.
ವಿಶ್ವಕರ್ಮನ ಪೀಳಿಗೆಯು ಆತನಿಗೆ ಮನು, ಮಯ, ತ್ವಷ್ಟ್ಯ ಶಿಲ್ಪ ಮತ್ತು ಸುರ್ನಸರೆಂದು ಐದು ಮಂದಿ ಮಕ್ಕಳೆಂದು ಅವರನ್ನು ಕ್ರಮವಾಗಿ ಸಾನಗ, ಸನಾತನ, ಅಹಭುವನ, ಪ್ರತ್ನಸ ಮತ್ತು ಸಪರ್ನಸರೆಂದೂ ಕರೆಯಲಾಗುತ್ತದೆಂದೂ ತಿಳಿಸುತ್ತದೆ. ಇವರೇ ವಿಶ್ವಕರ್ಮ ಗೋತ್ರ ಪ್ರವರ್ತಕರು. ಈ ಐದು ಮಂದಿ ಮಕ್ಕಳಿಗೆ ಕ್ರಮವಾಗಿ ಕಬ್ಬಿಣ, ಮರ(ಕಾಷ್ಠ), ತಾಮ್ರ ಹಾಗೂ ಕಂಚು, ಕಲ್ಲು (ಶಿಲೆ) ಮತ್ತು ಚಿನ್ನ ಬೆಳ್ಳಿಯ ಕಸಬುಗಾರಿಕೆಗಳನ್ನು ವಹಿಸಿಕೊಡಲಾಯಿತು ಈ ಐದು ಮಂದಿ ಮಕ್ಕಳೂ ವೇದಗಳನ್ನು ಅನುಸರಿಸಬೇಕಾಗಿದ್ದಿತು. (ವೇದಗಳ ಜ್ಞಾನವನ್ನು ತಿಳಿಯಬೇಕಾಗಿತ್ತು) ವಿಶ್ವಕರ್ಮನ ಈ ಐದು ಮಂದಿ ಮಕ್ಕಳ ಸಂತತೀಯೇ ಕಮ್ಮಾರರು, ಬಡಗಿಗಳು, ಲೋಹಕಕಾರರು, ಸ್ಥಪತಿಗಳು ಮತ್ತು ಸ್ವರ್ಣಕಾರರು ಈ ಐದು ವರ್ಗದ ಕುಶಲಕರ್ಮಿಗಳನ್ನು ಕುಲೀನ ಗೋತ್ರಗಳ ಪೌರುಷೇಯ ಬ್ರಾಹ್ಮಣರೆಂದೂ ಕರೆಯಲಾಗಿದೆ ವಿಶ್ವಕರ್ಮನ ಪೀಳಿಗೆಯಾದ ಈ ಐದು ವರ್ಗದ ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಪಂಚಾರ್ಷೇಯ ಬ್ರಾಹ್ಮಣರೆಂದು ಕರೆಯಲಾಗಿದೆ. ಮತ್ತೊಂದು ಅವತರಣಿಕೆಯು ವಿಶ್ವಕರ್ಮನನ್ನು ಭುವನನ ಮಗನೆಂದು ಅಭಿಪ್ರಾಯ ಪಡುತ್ತದೆ. ವಿಶ್ವಕರ್ಮನು ಪ್ರಭಾಸನ ಮಗನೆಂದೂ ತಿಳಿಯಲಾಗಿದೆ.

ವಿಶ್ವಕರ್ಮನನ್ನು ಸರ್ವಸೃಷ್ಠಿಕರ್ತನೆಂದು ಉಲ್ಲೇಖವಿದೆ. ಅನೇಕ ಪ್ರಾಚೀನ ಸಾಹಿತ್ಯ ಕೃತಿಗಳು, ಬಹು ಮಂದಿ ಶಿಲ್ಪಿಗಳು ವಿಶ್ವಕರ್ಮ ಎಂದು ಹೆಸರಿಟ್ಟುಕೊಂಡಿರುವುದನ್ನು ತಿಳಿಸುತ್ತದೆ. ಹಾಗಾಗಿ ಪ್ರಭಾವಸವಸಾವಿಗೆ ವಿಶ್ವಕರ್ಮ ಎಂಬ ಹೆಸರಿನ ಮಗನಿದ್ದನೆಂದು ತಿಳಿಯಬಹುದು. ಹೀಗೆಯೇ ಬೃಗು, ಅಂಗೀರಸ, ತ್ವಷ್ಟ್ಯ, ಕಶ್ಯಪ ಮುಂತಾದ ಋಷಿ ಸಮೂಹವೆಲ್ಲ ವಿಶ್ವಕರ್ಮನ ಸಂತತಿ. ವಿಶ್ವಕರ್ಮ ಋಷಿಗಳು ಮಾನವಶಾಸ್ತ್ರ ಮತ್ತು ಶಿಲ್ಪಶಾಸ್ತ್ರಗಳ ಕೃತಿಕಾರರೆಂದು ವೈಜಯಂತ ಋಷಿಗಳು ತಿಳಿಸುತ್ತಾರೆ. ವಿಶ್ವಕರ್ಮನು ಕಿರೀಟವನ್ನು ತಯಾರಿಸುವ ವಿಶೇಷಾಧಿಕಾರವನ್ನು ಹೊಂದಿದ್ದಷ್ಟೇ ಅಲ್ಲದೇ ರಾಜರಿಗೆ ಕಿರೀಟಧಾರಣೆ ಮಾಡುವ ಹಕ್ಕನ್ನು ಹೊಂದಿದ್ದ. ವಿಶ್ವಕರ್ಮರನ್ನು ವಿಶ್ವಕರ್ಮನ ಪ್ರತಿನಿಧಿಗಳೆಂದೇ ಭಾವಿಸಲಾಗಿದೆ. ಆದುದರಿಂದ ವಿಶ್ವಕರ್ಮನನ್ನು ಆರಾಧಿಸುವ ಸಂದರ್ಭಗಳಲೆಲ್ಲ ಶಿಲ್ಪಿಯನ್ನು ಆರಾಧಿಸುವುದು ಸೂಕ್ತಕ್ರಿಯೆ. ಶೃತಿ-ಸ್ಮತಿಗಳೂ ಸಹಾ ಶಿಲ್ಪಿಯನ್ನು ವಿಶ್ವಕರ್ಮನೆಂದು ವರ್ಣಿಸುವುದಲ್ಲದೇ ಆತನನ್ನು ವಾಸ್ತುಪುರುಷನೆಂದೂ ಪರಿಗಣಿಸಿವೆ. ಹಾಗಾಗಿ ಶಿಲ್ಪಾಚಾರ್ಯ ಆರಾಧನಾರ್ಹ. ಆದುದರಿಂದ ವಿಶ್ವಕರ್ಮರು ವಿಶ್ವಕರ್ಮನ ಸಂತತಿಯವರಾಗಿದ್ದು ವೈಧಿಕ ಸಂಪ್ರದಾಯಕ್ಕೆ ಸೇರಿದ ಬ್ರಾಹ್ಮಣ ವರ್ಗ.

  • ಲೇಖನ : ಕುಮಾರಿ ಚೈತ್ರಾ ಅ. ವಿಶ್ವಬ್ರಾಹ್ಮಣ, ಗಜೇಂದ್ರಗಡ

 

► Follow us on –  Facebook / Twitter  / Google+

Sri Raghav

Admin