ವಿಶ್ವದಲ್ಲಿ 30 ಕೋಟಿ ಜನರನ್ನು ಕಾಡುತ್ತಿದೆ ‘ಖಿನ್ನತೆ’

Dipression--01

ನವದೆಹಲಿ, ಏ.1-ವಿಶ್ವಾದ್ಯಂತ 30 ಕೋಟಿಗೂ ಅಧಿಕ ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ. ವಿಶ್ವ ಆರೋಗ್ಯ ದಿನಾಚರಣೆಗೆ (ಏಪ್ರಿಲ್ 7) ಮುನ್ನ ವರದಿಯೊಂದನ್ನು ಬಿಡುಗಡೆ ಮಾಡಿರುವ ಸಂಸ್ಥೆಯು ದೇಶದ ಬಹುತೇಕ ಎಲ್ಲ ದೇಶಗಳಲ್ಲೂ ಖಿನ್ನತೆ, ಹತಾಶೆ, ಮತ್ತು ಮಾನಸಿಕ ಒತ್ತಡಗಳಿಂದ ನರಳುತ್ತಿರುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತಿದೆ ಎಂದು ಹೇಳಿದೆ.   ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಮಾನಸಿಕ ಆರೋಗ್ಯ ರಕ್ಷಣೆಗಾಗಿ ಎಲ್ಲ ದೇಶಗಳೂ ಮರು ಚಿಂತಿಸಬೇಕಾದ ಗಂಭೀರ ಸನ್ನಿವೇಶವನ್ನು ಇದು ಸೃಷ್ಟಿಸಿದೆ ಎಂದು ಡಬ್ಲ್ಯುಎಚ್‍ಒ ತಿಳಿಸಿದೆ.

2005 ರಿಂದ 2015ರ ಹತ್ತು ವರ್ಷಗಳ ಅವಧಿಯಲ್ಲಿ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇ.18ರಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಅಂಕಿ-ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin