ವಿಶ್ವದ ಅತ್ಯಂತ ಬೃಹತ್ ರೇಡಿಯೋ ಟೆಲಿಸ್ಕೋಪ್ ಲೋಕಾರ್ಪಣೆ

Telescope

ಬೀಜಿಂಗ್, ಸೆ.25- ವಿಶ್ವದ ಅತ್ಯಂತ ದೊಡ್ಡ ರೇಡಿಯೋ ಟೆಲಿಸ್ಕೋಪ್‍ಅನ್ನು ಚೀನಾ ಇಂದು ಲೋಕಾರ್ಪಣೆ ಮಾಡಿದೆ. 30 ಫುಟ್ಬಾಲ್ ಕ್ರೀಡಾಂಗಣಗಳಷ್ಟು ದೊಡ್ಡದಾದ 4,450-ಪ್ಯಾನೆಲ್ ಪ್ರತಿಫಲಕಗಳನ್ನು ಹೊಂದಿರುವ ಈ ಬಾನುಲಿ ದೂರದರ್ಶಕ ಭೂಮಿಯ ಉಗಮದ ತಿಳುವಳಿಕೆ ಮತ್ತು ಅನ್ಯಗ್ರಹ ಜೀವಿಗಳಿಗೆ ನಡೆಯುತ್ತಿರುವ ಜಾಗತಿಕ ಶೋಧಕ್ಕೆ ನೆರವಾಗಲಿದೆ. ಚೀನಾದ ಗುಯಿಜೌವು ಪ್ರಾಂತ್ಯದ ಪಿಂಗ್‍ಟಾಂಕ್ ಕೌಂಟಿಯ ಕಾರ್‍ಸ್ಟ್ ಕಣಿವೆಯಲ್ಲಿ 500 ಮೀಟರ್ ಅಪರ್ಚರ್ ಸ್ಪೆರಿಕಲ್ ಟೆಲಿಸ್ಕೋಪ್ (ಫಾಸ್ಟ್) ಯೋಜನೆಯ ಅಧಿಕೃತ ಅನಾವರಣವನ್ನು ನೂರಾರು ಖಗೋಳ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ವಿಜ್ಞಾನ ಉತ್ಸಾಹಿಗಳು ಸಾಕ್ಷೀಕರಿಸಿದರು. 2011ರಲ್ಲಿ ಆರಂಭಗೊಂಡ ಈ ಟೆಲಿಸ್ಕೋಪ್ ನಿರ್ಮಾಣಕ್ಕೆ 180 ದಶಲಕ್ಷ ಡಾಲರ್ ವೆಚ್ಚವಾಗಿದೆ.

► Follow us on –  Facebook / Twitter  / Google+

Sri Raghav

Admin