ವಿಶ್ವಪ್ರಸಿದ್ಧ ಬೇಲೂರು ಚನ್ನಕೇಶವ ದೇವಾಲಯಕ್ಕೆ 10 ಲಕ್ಷ ದೇಣಿಗೆ ನೀಡಿದ ರೈತ

Beluru-NEws

ಬೇಲೂರು, ಅ.9- ಇಲ್ಲಿನ ವಿಶ್ವ ಪ್ರಸಿದ್ಧ ಶ್ರೀ ಚನ್ನಕೇಶವ ದೇವಾಲಯಕ್ಕೆ ಭಕ್ತರೊಬ್ಬರು ದಾಸೋಹ ಮತ್ತು ಅಭಿಷೇಕಕೆಂದು ಸುಮಾರು 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಅತ್ತಿಕಟ್ಟೆ ಗ್ರಾಮದ ಮೂಲತಃ ಕೃಷಿಕರಾದ ಎ.ಸಿ.ರೇವಣ್ಣ ಇಲ್ಲಿನ ದೇವಾಲಯದಲ್ಲಿ ನಡೆಯುವ ಅನ್ನ ದಾಸೋಹವು ಯಾವುದೆ ಹಣಕಾಸಿನ ತೊಂದರೆ ಇಲ್ಲದೆ ನಡೆದುಕೊಂಡು ಹೋಗಲಿ ಎಂಬ ಉದ್ದೇಶದಿಂದ ತಮ್ಮ ಮನೆ ದೇವರಾದ ಶ್ರೀ ಚನ್ನಕೇಶವ ದೇವಾಲಯಕ್ಕೆ ದೇವರ ಹೆಸರಿನಲ್ಲಿ ಕುಟುಂಬಸ್ಥರ ಪರವಾಗಿ ಸುಮಾರು 10 ಲಕ್ಷ ರೂ. ಕೊಟ್ಟು ದೇವಾಲಯದ ಅಭಿವೃದ್ಧಿಗೆ ಹಾಗೂ ದಾಸೋಹಕ್ಕೆ ಸಹಕಾರ ನೀಡುವ ಉದ್ದೇಶದಿಂದ ದೇವಾಲಯದ ವ್ಯವಸ್ಥಾಪನಾ ಮಂಡಳಿಗೆ ನೀಡಿದರು.

ಚನ್ನಕೇಶವ ದೇವಾಲಯದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ವೈ.ಟಿ.ದಾಮೋದರ್ ಮಾತನಾಡಿ, ಇಲ್ಲಿನ ಅನ್ನ ದಾಸೋಹಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಯಾರೂ ನೀಡಿರಲಿಲ್ಲ. ಆದರೆ, ಎ.ಸಿ.ರೇವಣ್ಣ ನೀಡಿದ್ದು, ಅವರಿಗೆ ಶುಭವಾಗಲಿ ಎಂದು ಆಶಿಸಿದರು. ದೇವಾಲಯ ಆಡಳಿತಾಧಿಕಾರಿ ವಿದ್ಯುನ್‍ಲತಾ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಶ್, ಕೇಶವಮೂರ್ತಿ, ವೆಂಕಟೇಗೌಡ, ಮಾಜಿ ಸದಸ್ಯೆ ವಿಜಯಲಕ್ಷ್ಮಿ, ಅರ್ಚಕ ಕೃಷ್ಣ ಬಟ್ಟರ್ (ಪಾಚು ಬಟ್ಟರ್) ಹಾಗೂ ಅತ್ತಿಕಟ್ಟೆ ಎ.ಸಿ.ರೇವಣ್ಣರವರ ಕುಟುಂಬಸ್ಥರು ಇದ್ದರು.

Sri Raghav

Admin