ವಿಶ್ವೇಶ್ವರಯ್ಯನವರ ಕರ್ತವ್ಯ ಪ್ರಜ್ಞೆ ಮಾದರಿ

chikkamangaluru
ಚಿಕ್ಕಮಗಳೂರು, ಸೆ.17- ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಸರಳತೆ, ಶಿಸ್ತು ಮತ್ತು ಕರ್ತವ್ಯ ಪ್ರಜ್ಞೆ ಯನ್ನು ಇಂದಿನ ಇಂಜಿನಿಯರ್‍ಗಳು ಮೈಗೂಡಿಸಿಕೊಳ್ಳಬೇಕು ಎಂದು ಮೆಸ್ಕಾಂ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಪುಷ್ಪಸಲಹೆ ಮಾಡಿದರು.  ನಗರದ ಮೆಸ್ಕಾಂ ಕಚೇರಿಯಲ್ಲಿ ನಡೆದ ಇಂಜಿನಿಯರ್ಸ್ ಡೇ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವೇಶ್ವರಯ್ಯನವರ ತಂತ್ರಜ್ಞಾನ ಮತ್ತು ಅದ್ಭುತ ಕೌಶಲ್ಯದಲ್ಲಿ ಕನಿಷ್ಟ ಶೇ.1 ರಷ್ಟರನ್ನಾದರೂ ಇಂದಿನ ಇಂಜಿನಿಯರ್‍ಗಳು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.  ಸರ್.ಎಂ. ವಿಶ್ವೇಶ್ವರಯ್ಯನವರು ನಾಡಿನ ಮತ್ತು ದೇಶದ ಅಭಿವೃದ್ಧಿಗಾಗಿ ಅವಿರತವಾಗಿ ದುಡಿದ ಮಹಾನ್ ವ್ಯಕ್ತಿ. ಅವರ ಸರಳತೆ, ಶಿಸ್ತು, ಕರ್ತವ್ಯ ಪರತೆ, ತಂತ್ರಜ್ಞಾನ ಮತ್ತು ಅದ್ಭುತ ಕೌಶಲ್ಯಗಳನ್ನು ಕರಗತ ಮಾಡಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ದುಡಿಯುವಂತೆ ಸಲಹೆ ಮಾಡಿದರು.

ನಿವೃತ್ತ ಅಧೀಕ್ಷಕ ಅಂಭಿಯಂತ ಸಿ.ಎಸ್ ವಿಜಯ್‍ಕುಮಾರ್ ಮಾತನಾಡಿ, ವಿಶ್ವೇಶ್ವರಯ್ಯನವರ ಸಾಧನೆ ಇಂದಿನ ಇಂಜಿನಿಯರ್‍ಗಳಿಗೆ ದಾರಿ ದೀಪವಾಗಬೇಕು ಆ ಬೆಳಕಿನಲ್ಲಿ ಅವರು ಸಾಗುವ ಮೂಲಕ ದೇಶದ ಅಭಿವೃದ್ಧಿಗೆ ದುಡಿಯಬೇಕು ಎಂದು ಸಲಹೆ ಮಾಡಿದರು.  ನಿವೃತ್ತರಾದ ಅಧೀಕ್ಷಕ ಅಂಭಿಯಂತರ ಸಿ.ಎಸ್ ವಿಜಯ್‍ಕುಮಾರ್ ಮತ್ತು ಜೂನಿಯರ್ ಇಂಜಿನಿಯರ್ ಬಿ. ಶಿವಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ಕಾರ್ಯಪಾಲಕ ಅಭಿಯಂತರ ಅಣ್ಣಪ್ಪ, ಜೂನಿಯರ್ ಇಂಜಿನಿಯರ್ ಎ.ವಿ ಅನಂತರಾಮಯ್ಯ, ಹೆಚ್. ಚಂದ್ರಶೇಖರ್, ಜಿ.ಎಸ್ ಉಮೇಶ್ ಶಂಕರನಾಯಕ್ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin