ವಿಷ ಸೇವಿಸಿ ರೈತ ದಂಪತಿ ಆತ್ಮಹತ್ಯೆ
ಚಿಕ್ಕಮಗಳೂರು, ನ.5- ಸಾಲಬಾಧೆ ತಾಳಲಾರದೆ ರೈತ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತರೀಕೆರೆ ತಾಲ್ಲೂಕಿನ ಅಮೃತಾಪುರದಲ್ಲಿ ನಡೆದಿದೆ.ರಾಘವೇಂದ್ರ (45) ಹಾಗೂ ರತ್ನಮ್ಮ (35) ಮೃತ ರೈತ ದಂಪತಿ.ಅಮೃತಪುರದಲ್ಲಿ ಚಿಕ್ಕಅಂಗಡಿ ಹಾಗೂ ಹೋಟೆಲ್ ನಡೆಸುತ್ತಿದ್ದ ಇವರು ಮುಕ್ಕಾಲು ಎಕರೆ ಜಮೀನು ಹೊಂದಿದ್ದರು.ಬ್ಯಾಂಕ್ ಹಾಗೂ ಕೈಸಾಲ ಸೇರಿದಂತೆ ಸುಮಾರು 15 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.ಇವರಿಗೆ 12 ವರ್ಷದ ಹೆಣ್ಣು ಹಾಗೂ 4 ವರ್ಷದ ಗಂಡು ಮಗುವನ್ನು ಬಿಟ್ಟು ರಾತ್ರಿ ಅಂಗಡಿಯಲ್ಲಿಯೇ ಟೊಮ್ಯಾಟೋಗೆ ಸಿಂಪಡಿಸುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.