ವೃದ್ಧಾಶ್ರಮಕ್ಕೆ 5 ಲಕ್ಷ ರೂ. ಸಹಾಯ

old--womans

ಚಿಕ್ಕಬಳ್ಳಾಪುರ, ಸೆ.7– ತಾಲೂಕಿನ ಸುಲ್ತಾನಪೇಟೆ ಬಳಿ ಇರುವ ಶ್ರೀ ಸಾಯಿದ್ವಾರಕಮಯಿ ವೃದ್ಧಾಶ್ರಮಕ್ಕೆ ಜಿ.ಪಂ.ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಭೇಟಿ ನೀಡಿ ವೃದ್ಧರ ಕ್ಷೇಮ ಸಮಾಚಾರ ವಿಚಾರಿಸಿ ಅನಾಥಾಶ್ರಮದಲ್ಲಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕೆಲಸಗಳಿಗೆ ಜಿ.ಪಂ.ವತಿಯಿಂದ 5 ಲಕ್ಷ ರೂಗಳನ್ನು ಶೀಘ್ರದಲ್ಲೇ ಕೊಡುವುದಾಗಿ ಭರವಸೆ ನೀಡಿದರು. ವೃದ್ಧಾಶ್ರಮದಲ್ಲಿ ಹಲವರು ಆಶ್ರಯವನ್ನು ಪಡೆದುಕೊಂಡು ಒಳ್ಳೆಯ ಪರಿಸರದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಇವರನ್ನು ತಂದೆ ತಾಯಿಗಳಂತೆ ನೋಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅನಾಥಾಶ್ರಮದಲ್ಲಿರುವ ವೃದ್ಧರಿಗೆ ಸವಲತ್ತುಗಳನ್ನುಒದಗಿಸುವುದಾಗಿತಿಳಿಸಿದರು.ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ.ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Follow us on –  Facebook / Twitter  / Google+

 

 

Sri Raghav

Admin