ವೈದ್ಯರ ವೇಷದಲ್ಲಿ ಬಂದು ಸೇನಾ ಆಸ್ಪತ್ರೆ ಮೇಲೆ ಉಗ್ರರ ದಾಳಿ : ಹಲವರ ಸಾವು

Terrorisrt--01

ಕಾಬೂಲ್,ಮಾ.8- ವೈದ್ಯರಂತೆ ಉಡುಪು ಧರಿಸಿದ ಉಗ್ರಗಾಮಿಗಳ ಗುಂಪೊಂದು ನಡೆಸಿದ ದಾಳಿಯಲ್ಲಿ ಹಲವು ಮಂದಿ ಮೃತಪಟ್ಟಿರುವ ಘಟನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನ ಬೃಹತ್ ಸೇನಾ ಆಸ್ಪತ್ರೆಯಲ್ಲಿ ನಡೆದಿದೆ. ಸರ್ದಾರ್ ದೌಡ್‍ಖಾನ್ ಆಸ್ಪತ್ರೆಗೆ ವೈದ್ಯರ ಸೋಗಿನಲ್ಲಿ ನುಗ್ಗಿದ ಉಗ್ರರು ಬಾಂಬ್ ಸ್ಫೋಟಿಸಿ ಗುಂಡಿನ ದಾಳಿ ನಡೆಸಿದರು. ಈ ಆಕ್ರಮಣದಲ್ಲಿ ಯೋಧರು ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಾವು-ನೋವಿನ ನಿಖರ ಸಂಖ್ಯೆ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. ಈ ದಾಳಿಗೆ ಯಾವುದೇ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲವಾದರೂ ತಾಲಿಬಾನ್ ಉಗ್ರರು ಈ ವಿಧ್ವಂಸಕ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin