ವೈದ್ಯೆ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ವೈದ್ಯ

new-york
ನ್ಯೂಯಾರ್ಕ್, ಜು. 1-ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಜಾಗೊಂಡಿದ್ದ ವೈದ್ಯನೊಬ್ಬ ಕುಪಿತನಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳಾ ವೈದ್ಯೆ ಹತಳಾಗಿ, ಇತರ ಆರು ಮಂದಿ ತೀವ್ರ ಗಾಯಗೊಂಡಿದ್ದಾರೆ. ಈ ಕೃತ್ಯ ಎಸಗಿದ ವೈದ್ಯ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಡೆದಿದೆ.  ಬ್ರೊಂಕ್ಸ್ ಲೆಬನಾನ್ ಹಾಸ್ಪಿಟಲ್‍ನಲ್ಲಿ ಈ ಆಕ್ರಮಣ ನಡೆಸಿ ಸಾವು-ನೋವಿಗೆ ಕಾರಣವಾಗಿ ಆತ್ಮಹತ್ಯೆಗೆ ಶರಣಾದ ವೈದ್ಯನನ್ನು ಹೆನ್ರಿ ಬೆಲ್ಲೋ(45) ಎಂದು ಗುರುತಿಸಲಾಗಿದೆ.ಮಹಿಳಾ ವೈದ್ಯೆಯರು ಮತ್ತು ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಈತನನ್ನು ಇತ್ತೀಚೆಗೆ ಸೇವೆಯಿಂದ ವಜಾಗೊಳಿಸಲಾಗಿತ್ತು. ಇದೇ ದ್ವೇಷಕ್ಕಾಗಿ ವೈದ್ಯನ ಉಡುಪಿನಲ್ಲಿ ಆಸ್ಪತ್ರೆಗೆ ನುಗ್ಗಿದ ಈತ ಮಹಿಳಾ ವೈದ್ಯೆಯ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ. ಈ ದಾಳಿಯಲ್ಲಿ ಆರು ಮಂದಿ ಗಾಯಗೊಂಡರು. ಈ ಕುಕೃತ್ಯ ಎಸಗಿದ ನಂತರ ಡಾ. ಹೆನ್ರಿ ತಾನೂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಎಂದು ನ್ಯೂಯಾರ್ಕ್  ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin