ವೈರಲ್ ಆಯ್ತು ಅಮಿತಾಬ್ ಬಚ್ಚನ್ ಸಾವಿನ ಸುಳ್ಳು ಸುದ್ದಿ..!
ಮುಂಬೈ. ಜ.23 : ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಇನ್ನಿಲ್ಲ ಎಂಬ ಸುಳ್ಳು ಸುದ್ದಿ ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಲ್ಲಿ ಜೋರಾಗಿ ಹರಿದಾಡುತ್ತಿದೆ. ಅಮಿತಾಬ್ ಬಚ್ಚನ್ ಮಲಗಿರುವ, ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ದೌಡಾಯಿಸುತ್ತಿರುವ ಫೋಟೋ ಸಮೇತ ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ್ದು ಈಗ ಅದು ವೈರಲ್ ಆಗಿದೆ.
ಈ ಸುದ್ದಿಯನ್ನು ಕೇಳಿ ಬಿಗ್ ಬಿ ಅಭಿಮಾನಿಗಳಿಗೆ ಒಂದು ಕ್ಷಣ ಶಾಕ್ ಆಗಿದ್ದಂತೂ ನಿಜ. ಯಾರೋ ದುಷ್ಕರ್ಮಿಗಳು ಚಚ್ಚನ್ ಇನ್ನಿಲ್ಲ ಎಂಬ ಸುದ್ದಿಯನ್ನು ವಾಟ್ಸಾಪ್ ಸೇರಿ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇನ್ನು ಕೆಲವರು ಈ ಸುದ್ದಿಯನ್ನು ನಿಜವೇ, ಸುಳ್ಳೇ ಎಂದು ತಿಳ್ದುಕೊಳ್ಳುವ ಮೊದಲೇ ಮತ್ತೊಬ್ಬರಿಗೆ ಶೇರ್ ಮಾಡುತ್ತಿದ್ದಾರೆ. ಹೀಗಾಗಿ ಅಮಿತಾಬ್ ಬಚ್ಚನ್ ಸಾವಿನ ಸುದ್ದಿ ಕಳೆದೆರೆಡು ದಿನಗಳಿದ ಎಲ್ಲರ ಮೊಬೈಲ್ ಗಳಲ್ಲೂ ಓಡಾಡುತ್ತಿದೆ.
ಈ ಸುದ್ದಿ ಸುಳ್ಳು ಎಂದು ತಿಳಿದ ಬಚ್ಚನ್ ಅಭಿಮಾನಿಗಳು ದೇಶ ಕಂಡ ಶ್ರೇಷ್ಠ ನಟ ನೂರು ಕಾಲ ಬದುಕಿರಲಿ ಎಂದು ಆಶಿಸುತ್ತಿದ್ದಾರೆ. ಹಾಗೆಯೇ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >