ವ್ಯಕ್ತಿಯೊಬ್ಬರ ತಲೆ ಕತ್ತರಿಸಿ ಬರ್ಬರ ಹತ್ಯೆ
ಶಿವಮೊಗ್ಗ , ಮಾ.8- ವ್ಯಕ್ತಿಯೊಬ್ಬರ ತಲೆ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಅಂಜನಾಪುರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಕೇಶಿಯಾ ನಾಯ್ಕ (65) ಎಂದು ತಿಳಿದು ಬಂದಿದೆ. ಅಂಜನಾಪುರ ಗ್ರಾಮದ ಬಳಿಯೇ ಜಲಾಶಯವೊಂದಿದ್ದು , ಸಂಗಪ್ಪ ಎಂಬುವರ ತೋಟದಲ್ಲಿ ಕಳೆದ ರಾತ್ರಿ ದುಷ್ಕರ್ಮಿಗಳು ಕೇಶಿಯಾ ನಾಯ್ಕ ಅವರನ್ನು ರುಂಡ ಕತ್ತರಿಸಿ ಕೊಲೆ ಮಾಡಿದ್ದಾರೆ. ತಡರಾತ್ರಿ ಗ್ರಾಮಸ್ಥರೊಬ್ಬರು ಇದನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಶ್ವಾನ ದಳ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
Facebook Comments