ವ್ಯಕ್ತಿ ಅಳಿದರೂ ಅವರ ವ್ಯಕ್ತಿತ್ವಕ್ಕೆ ಸಾವಿಲ್ಲ : ದಿ. ಜಗದೀಶ ದುದ್ಗಿ           

10

ಗಜೇಂದ್ರಗಡ,ಫೆ.14- ವ್ಯಕ್ತಿ ಅಳಿದರೂ ಅವರ ವ್ಯಕ್ತಿತ್ವಕ್ಕೆ ಸಾವಿಲ್ಲ ಎನ್ನುವುದಕ್ಕೆ ದಿ. ಜಗದೀಶ ದುದ್ಗಿ ಅವರೇ ಸ್ಪಷ್ಟ ನಿದರ್ಶನ. ಅವರ ಸಮಾಜಸೇವೆ, ಸಾಮಾಜಿಕ ಕಳಕಳಿ, ಸೇವಾ ನಿಷ್ಠೆ, ನುಡಿದಂತೆ ನಡೆಯುವ ವ್ಯಕ್ತಿತ್ವ ಎಲ್ಲರಿಗೂ ಮಾರ್ಗದರ್ಶಕವಾದದ್ದು ಎಂದು ಸಾಹಿತಿ, ವಿಶ್ರಾಂತ ಉಪನ್ಯಾಸಕ ಬಿ.ಎ. ಕೆಂಚರೆಡ್ಡಿ ಹೇಳಿದರು. ಪಟ್ಟಣದ ಮೈಸೂರಮಠದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಮಾಜಿ ಕಸಾಪ ತಾಲೂಕ ಅಧ್ಯಕ್ಷ ಜಗದೀಶ ದುದ್ಗಿ ಅವರಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು. ಪಾದರಸದಂತಹ ಅವರ ಚಟುವಟಿಕೆ ಎಲ್ಲರಿಗೂ ಸ್ಪೂರ್ತಿಯಾಗಿತ್ತು. ಕಸಾಪ ಅಧ್ಯಕ್ಷರಾಗಿದ್ದಾಗ ಅವರು ಮಾಡಿದ ಕಾರ್ಯಗಳು, ಕೈಗೊಂಡ ನಿರ್ಧಾರಗಳು ಇಂದಿಗೂ ಅವರ ನೆನಪು ಸದಾ ಕಾಡುತ್ತದೆ. ಎಸ್.ಎಂ. ಭೂಮರೆಡ್ಡಿ ಕಾಲೇಜಿಗೂ ಹಾಗೂ ಕನ್ನಡ ಸಾಹಿತ್ಯ ಪರಿಷತ್ತ್ತಿಗೆ ಅವರ ಕೊಡುಗೆ ಅನನ್ಯ ಎಂದರು. ಇದೇ ಸಂದರ್ಭದಲ್ಲಿ ರವೀಂದ್ರ ಹೊನವಾಡ, ಕೆ.ಜಿ ಸಂಗಟಿ, ಹುಚ್ಚಪ್ಪ ಹಾವೇರಿ, ಬಿ.ಎಸ್. ಶೀಲವಂತರ, ಶಂಕರ ಕಲ್ಲಿಗನೂರ, ದಾವಲಸಾಬ ತಾಳಿಕೋಟಿ, ಆರ್.ಕೆ. ಬಾಗವಾನ, ಹುಸ್ಮನ ಹಿರೇಹಾಳ, ಎಂ.ಎಸ್. ಮಕಾನದಾರ ಸೇರಿದಂತೆ ಇತರರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin