ಶನಿ ಗ್ರಹದ ಉಂಗುರಗಳ ನಡುವೆ ಯಶಸ್ವಿಯಾಗಿ ನುಸುಳಿದ ಕ್ಯಾಸಿನಿ ಬಾಹ್ಯಾಕಾಶ ನೌಕೆ

Cassini-spacecraft

ವಾಷಿಂಗ್ಟನ್, ಏ.28-ಸೌರಮಂಡಲದ ಅತ್ಯಂತ ಸುಂದರ ಗ್ರಹ ಶನಿ ಮತ್ತು ಅದರ ಉಂಗುರಗಳ ನಡುವೆ ಅತಿ ಕಿರು ಅಂತರದಲ್ಲಿ ನುಸುಳಿಕೊಂಡು ಹೋಗುವ ತನ್ನ ಪ್ರಪ್ರಥಮ ಪ್ರಯತ್ನದಲ್ಲಿ ಕ್ಯಾಸಿನಿ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿದೆ. ಮಾನವರಹಿತ ನೌಕೆಯ ಈ ವಿನೂತನ ಪ್ರಯೋಗದಲ್ಲಿ ಸಫಲವಾಗಿದ್ದು, ಶನಿ ಗ್ರಹದ ಮುಂದಿನ ಸಂಶೋಧನೆ ಮೇಲೆ ಮತ್ತಷ್ಟು ಬೆಳಕು ಚೆಲ್ಲಲಿದೆ.   ಸ್ಯಾಟರನ್ ಗ್ರಹ ಮತ್ತು ಅದರ ರಿಂಗ್‍ಗಳ ನಡುವೆ ತೂರಿಕೊಂಡು ಹಾದು ಹೋದ ಸಂದರ್ಭದಲ್ಲಿ ವೈಜ್ಞಾನಿಕ ಮಾಹಿತಿಗಳನ್ನು ಭೂಮಿಗೆ ರವಾನಿಸುವ ಪ್ರಕ್ರಿಯೆಯಲ್ಲಿ ಕ್ಯಾಸಿನಿ ತೊಡಗಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ತಿಳಿಸಿದೆ.ಕ್ಯಾಸಿನಿ ಒಳ ನುಸುಳಿದಾಗ ಶನಿ ಗ್ರಹದ ಒಳಗಿನ ಮೋಡಗಳಿಂದ ಸುಮಾರು 3,000 ಕಿ.ಮೀ. ಹಾಗೂ ಅದರ ಉಂಗುರಗಳ ಅತ್ಯಂತ ಒಳಗಿನ ದೃಗೋಚರ ತುದಿಯಿಂದ ಸುಮಾರು 300 ಕಿ.ಮೀ. ಅಂತರದಲ್ಲಿತ್ತು.  ಕ್ಯಾಲಿಫೆÇೀರ್ನಿಯಾದ ಮೊಬಾವ್ ಮರುಭೂಮಿಯಲ್ಲಿ ನಾಸಾದ ಡೀಪ್ ಸ್ಪೇಸ್ ನೆಟ್‍ವರ್ಕ್ ಗೋಲ್‍ಸ್ಟೋನ್ ಕಾಂಪ್ಲೆಕ್ಸ್ ಇಡಿಟಿ (ಸಮಯ) ಗುರುವಾರ 2.56ಕ್ಕೆ ಕ್ಯಾಸಿನಿಯಿಂದ ಸಂಕೇತಗಳನ್ನು ಪಡೆದುಕೊಂಡಿತು ಹಾಗೂ ಇಡಿಟಿ 3.10ಕ್ಕೆ ಮಾಹಿತಿ ಬರಲು ಆರಂಭಿಸಿತು ಎಂದು ಅಂತರಿಕ್ಷ ವಿಜ್ಞಾನಿಗಳು ಹೇಳಿದ್ದಾರೆ.   ಶನಿ ಗ್ರಹ ಮತ್ತು ಅದರ ಸುತ್ತ ಇರುವ ಸುಂದರ ಉಂಗುರ ದೃಶ್ಯಗಳನ್ನು ಕ್ಯಾಸಿನಿ ಅತ್ಯಂತ ಸಮೀಪದಿಂದ ಸೆರೆಹಿಡಿದು ರವಾನಿಸಿದೆ. ಈ ಆಕರ್ಷಕ ಚಿತ್ರಗಳನ್ನು ನಾಸಾ ಬಿಡುಗಡೆಗೊಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin