ಶಾಕಿಂಗ್ : ಪೋಯಸ್ ಗಾರ್ಡನ್‍, ಕೊಡನಾಡು ಎಸ್ಟೇಟ್‍, ಸಮಾಧಿ ಬಳಿ ಮುಗಿಲುಮುಟ್ಟುತ್ತಿದೆ ಅಮ್ಮನ ಆತ್ಮದ ಆಕ್ರಂದನ..!

Jayalalitha--01

ಚೆನ್ನೈ, ಮೇ 14-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಸಾವಿನ ನಂತರ ಅವರ ಆತ್ಮ ತನ್ನ ನಿವಾಸ ಸುತ್ತ ಅಲೆದಾಡುತ್ತಿದೆ ಎಂಬ ಹಲವು ವದಂತಿಗಳು ಹರಡುತ್ತಿದ್ದು , ಅದಕ್ಕೆ ಪುಷ್ಟಿ ನೀಡುವಂತೆ ಹಲವು ದಿನಗಳಿಂದ ಅಮ್ಮನ ನಿವಾಸ ಪೋಯಸ್ ಗಾರ್ಡನ್‍ನಲ್ಲಿ ಯಾರೋ ಅಳುವ, ಗೋಳಿಡುವ ಸದ್ದು ಕೇಳಿಬರುತ್ತಲೇ ಇದೆಯಂತೆ. ಅಷ್ಟೇ ಅಲ್ಲದೆ ಜಯಲಲಿತಾ ಅವರ ಸಮಾಧಿ ಸ್ಥಳವಾದ ಮರೀನಾ ಬೀಚ್‍ನಲ್ಲೂ ಅಂಥದೊಂದು ಅಳು ಕೇಳಿಬರುತ್ತಿದ್ದು , ಸಮಾಧಿ ಕಾವಲಿಗಿರುವ ಸೆಕ್ಯುರಿಟಿಗಳು ಕೂಡ ಅಮ್ಮನ ಆತ್ಮವಿದೆ ಎಂದೇ ಹೇಳುತ್ತಿದ್ದಾರೆಯತೆ. ಸಮಾಧಿ ಸ್ಥಳದಲ್ಲಿ ಇದುವರೆಗೂ 20 ಭದ್ರತಾ ಸಿಬ್ಬಂದಿಗಳು ಬದಲಾಗಿದ್ದು, ಯಾರೊಬ್ಬರೂ ಇಲ್ಲಿ ಕಾವಲು ನಿರ್ವಹಿಸಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ತಮಿಳುನಾಡಿನ್ಯಾದಂತ ಕೋಪೋದ್ರಿಕ್ತ ಭೂತ( ಆತ್ಮ)ದ ಬಗ್ಗೆ ಭಾರೀ ಗುಸುಗುಸು, ಚರ್ಚೆಗಳು ನಡೆಯುತ್ತಿವೆ.ಜಯ ಲಲಿತಾ ಅವರ ಸಾವಿನ ನಂತರ ನಡೆದ ಅನೇಕ ಘಟನೆಗಳಿಗೂ ಅಮ್ಮನ ಕೋಪೋದ್ರಿಕ್ತ ಆತ್ಮದ ಅಲೆದಾಟವೇ ಕಾರಣವೇ…? ಯಾಕೆಂದರೆ ಅಮ್ಮ ವಾಸವಿದ್ದ ಪೊಯೆಸ್ ಗಾರ್ಡನ್‍ನಲ್ಲಿ ಯಾರೋ ಅಳುವ ಶಬ್ದ, ಊಟಿಯ ಕೊಡನಾಡು ಎಸ್ಟೇಟ್‍ನಲ್ಲಿ ಕಾವಲುಗಾರ ಭರತ್ ಸಿಂಗ್ ಕೊಲೆ, ದರೋಡೆ ಪ್ರಕರಣದ ಪ್ರಮುಖ ಆರೋಪಿ ಅಪಘಾತದಲ್ಲಿ ಸಾವನ್ನಪ್ಪಿದ್ದು , ಸಚಿವರೊಬ್ಬರ ಆಪ್ತರೊಬ್ಬರ ನಿಗೂಢ ಸಾವು ಈ ಎಲ್ಲದರ ಹಿಂದೆ ಜಯಲಲಿತಾರ ಅತೃಪ್ತ ಆತ್ಮದ ಕೈವಾಡವಿದೆ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇದೇ ವೇಳೆ ಜಯಾರ ಬಂಗಲೆಯಲ್ಲಿ ಅಡುಗೆ ಭಟ್ಟನಾಗಿದ್ದ ಪಾಂಚಾಲೈ ಮೇಲೆ ಅಪರಿಚಿತ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಾ ಬಂಗಲೆ ಮತ್ತು ಎಸ್ಟೇಟ್ ಸಿಬ್ಬಂದಿ ಮೇಲೆ ಏಕೆ ಇಂಥ ಘಟನೆಗಳು ಮರುಕಳಿಸುತ್ತಿವೆ ಎಂಬುದು ಕಗ್ಗಂಟಿನ ಪ್ರಶ್ನೆಯಾಗಿದೆ.
ರಾಜಕೀಯದಲ್ಲಿ ಸುದೀರ್ಘ ನೆಲೆಕಂಡು ತಮಿಳಿಗರ ಪಾಲಿಗೆ ಅಮ್ಮನೇ ಎಂದು ಭಾವನಾತ್ಮಕ ಸಂಬಂಧ ಹೊಂದಿರುವ ಜಯಲಲಿತಾ ಅವರ ಸಾವು ಅಸಹಜ ಎಂದು ಹೇಳಲಾಗುತ್ತಿದ್ದು , ಅದು ನಿಜವೇ ಆದರೆ ಅತೃಪ್ತ ಆತ್ಮವಾಗಿ ಕಾಡುವುದು ಸಹಜ ಎಂದು ಹಲವು ಜ್ಯೋತಿಷಿಗಳು ಹೇಳುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin