ಶಾಕಿಂಗ್ : 3 ರಾಜ್ಯಗಳ ಮೂಲಕ ಭಾರತದೊಳಗೆ ನುಸುಳಿದ್ದಾರೆ 2,000ಕ್ಕೂ ಹೆಚ್ಚು ಉಗ್ರರು..!
ಕೊಲ್ಕತಾ, ಮಾ.21-ಭಾರತದೊಳಗೆ ಭಯೋತ್ಪಾದಕರು ನಸುಳುತ್ತಿರುವ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಛಾಗುತ್ತಿರುವಾಗಲೇ, 2,000ಕ್ಕೂ ಹೆಚ್ಚು ಜಿಹಾದಿಗಳು ದೇಶವನ್ನು ಪ್ರವೇಶಿಸಿ ಭಾರೀ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಜ್ಜಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಬಾಂಗ್ಲಾದೇಶ ಸರ್ಕಾರ ಕೇಂಧ್ರ ಗೃಹ ಸಚಿವಾಲಯಕ್ಕೆ ರವಾನಿಸಿದೆ. ಈ ಹಿನ್ನೆಲೆಯನ್ನು ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಒಂದೆಡೆ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಬೆಂಬಲಿತ ಉಗ್ರರ ನುಸುಳುವಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಇನ್ನೊಂದೆಡೆ ಬಾಂಗ್ಲಾದ ಭಯೋತ್ಪಾದಕರು ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗುತ್ತಿದ್ದು ಆತಂಕಕಾರಿ ಸಂಗತಿಯಾಗಿದೆ.
ಈ ಕುರಿತು ಕೇಂದ್ರ ಸರ್ಕಾರಕ್ಕೆ ರಹಸ್ಯ ವರದಿಯೊಂದನ್ನು ರವಾನಿಸಿರುವ ಬಾಂಗ್ಲಾ ಸರ್ಕಾರ 2015ಕ್ಕಿಂತ 2016ರಲ್ಲಿ ಭಯೋತ್ಪಾದಕರ ನುಸುಳುವಿಕೆ ಮೂರು ಪಟ್ಟು ಹೆಚ್ಚಾಗಿದೆ. ಈ ವರ್ಷದ ಆರಂಭದಿಂದಲೂ ಅದು ತೀವ್ರಗೊಳ್ಳುತ್ತಲೇ ಇದೇ ಎಂದು ಎಚ್ಚರಿಕೆ ನೀಡಿದೆ. ಹರ್ಕತ್-ಉಲ್-ಜಿಹಾದಿ ಅಲ್-ಇಸ್ಲಾಮಿ (ಹುಜಿ) ಮತ್ತು ಜಮಾತ್-ಉಲ್-ಮುಜಾ ಹಿದ್ಧಿನ್ ಬಾಂಗ್ಲಾದೇಶ (ಜೆಎಂಬಿ) ಉಗ್ರರು ಭಾರತದೊಳಗೆ ನುಸುಳಿ ವಿಚ್ಛಿದ್ರಕಾರಿ ಕೃತ್ಯಗಳನ್ನು ಎಸಗುವ ಸಾಧ್ಯತೆ ದಟ್ಟವಾಗಿದೆ ಎಂದು ಗೋಪ್ಯ ವರದಿಯಲ್ಲಿ ತಿಳಿಸಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಮತ್ತು ತ್ರೀಪುರ ರಾಜ್ಯಗಳ ಗಡಿ ಮೂಲಕ ಈ ಜಿಹಾದಿಗಳು ಭಾರತದೊಳಗೆ ಈಗಾಗಲೇ ನುಸುಳಿದ್ದು, ಕಟ್ಟೆಚ್ಚರದಿಂದ ಇರುವಂತೆ ತಿಳಿಸಲಾಗಿದೆ.
ಖಾಗ್ರಾಗಾರ್ನಲ್ಲಿ 2014ರಲ್ಲಿ ನಡೆದ ಬುದ್ರ್ವಾನ್ ಸ್ಫೋಟ ಪ್ರಕರಣದಲ್ಲಿ ಜೆಎಂಬಿ ಉಗ್ರರ ಪಾತ್ರ ಸಾಬೀತಾಗಿರುವ ಬಗ್ಗೆ ರಾಷ್ಟ್ರೀಯ ಬೇಹುಗಾರಿಕೆ ಸಂಸ್ಥೆಗೆ (ಎನ್ಐಎ) ಪುರಾವೆ ಲಭಿಸಿರುವುದರಿಂದ ಈ ಬೆಳವಣಿಗೆ ಭಾರೀ ಮಹತ್ವ ಪಡೆದುಕೊಂಎಇದೆ. ಈ ಮೂರು ರಾಜ್ಯಗಳ ಗಡಿ ಮೂಲಕ ಈಗಾಗಾಲೇ ಸುಮಾರು 2,010 ಹುಜಿ ಮತ್ತು ಜೆಎಂಬಿ ಉಗ್ರರು ನುಸುಳಿದ್ದಾರೆ. ಇವರಲ್ಲಿ ಬಾಂಗ್ಲಾ ಗಡಿ ಮೂಲಕ 720 ಮಂದಿ ಭಾರತ ಪ್ರವೇಶಿಸುವ ಸುರಕ್ಷಿತ ಮಾರ್ಗವನ್ನು ಕಂಡುಕೊಂಡಿದ್ದಾರೆ. ಉಳಿದ 1,290 ಮಂದಿ ಅಸ್ಸಾಂ ಮತ್ತು ತ್ರಿಪುರ ಮೂಲಕ ದೇಶದೊಳಗೆ ನುಸುಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2014 ಮತ್ತು 2015ರಲ್ಲಿ ಕ್ರಮವಾಗಿ 800 ಮತ್ತು 659 ಉಗ್ರರು ಈ ರಾಜ್ಯಗಳ ಗಡಿ ಮುಖಾಂತರ ಭಾರತವನ್ನು ಪ್ರವೇಶಿಸಿದ್ದ ಬಗ್ಗೆ ಮಾಹಿತಿಗಳಿವೆ.
ಈ ವರದಿಯಿಂದಾಗಿ ಮೂರು ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಆತಂಕ ಸೃಷ್ಟಿಯಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕಳೆದ ಆರು ತಿಂಗಳಿನಿಂದ ಭಯೋತ್ಪಾದನೆ ಚಟುವಟಿಕೆ ಹೆಚ್ಚಾಗುತ್ತಿದೆ ಎಂಬುದನ್ನು ಅಸ್ಸಾಂನ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಪಲ್ಲಬ್ ಭಟ್ಟಾಚಾರ್ಯ ಒಪ್ಪಿಕೊಂಡಿದ್ದು, 54 ಜೆಎಂಬಿ ಉಗ್ರರನ್ನು ಬಂಧಿಸಿರುವುದು ಖಚಿತಪಡಿಸಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳೂ ಸೇರಿದಂತೆ ದೇಶದ ಸೂಕ್ಷ್ಮ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >