ಶಾಲೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ 5ನೇ ತರಗತಿ ವಿದ್ಯಾರ್ಥಿನಿ

Spread the love

Girl-Baby

ಮಲೆಮಹದೇಶ್ವರ ಬೆಟ್ಟ ಆ. 28 : 5ನೇ ತರಗತಿ ಓದುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಸೋದರಮಾವನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದ ಬಾಲಕಿಯೊಬ್ಬಳು, ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾಗಿದ್ದಳು.   14 ವರ್ಷದ ಬುಡಕಟ್ಟು ಜನಾಂಗದ ಬಾಲಕಿ ಸೋದರಮಾವನನ್ನು ಪ್ರೀತಿಸಿದ್ದು, ದೈಹಿಕ ಸಂಪರ್ಕದಿಂದ ಶಾಲೆಗೆ ಹೋಗುವ ವಯಸ್ಸಲ್ಲೇ ಗರ್ಭಿಣಿಯಾಗಿದ್ದಾಳೆ. ಪೋಷಕರು ಮಗು ತೆಗೆಸಲು ಮುಂದಾದರೂ ಬಾಲಕಿ ಒಪ್ಪಿಲ್ಲ ಎನ್ನಲಾಗಿದೆ. ತಾನು ಗರ್ಭಿಣಿಯಾಗಿದ್ದ ವಿಷಯವನ್ನು ಮುಚ್ಚಿಟ್ಟಿದ್ದ ಆಕೆ, ಹಾಸ್ಟೆಲ್ ಒಂದರಲ್ಲಿ ಇದ್ದುಕೊಂಡು ಓದುತ್ತಿದ್ದಳು. ಶುಕ್ರವಾರ ಬೆಳಿಗ್ಗೆ ಶಾಲೆಗೆ ಬಂದಿದ್ದ ಬಾಲಕಿ ಹೆರಿಗೆ ನೋವಿನಿಂದ ಬಳಲುತ್ತಿದ್ದಳು. ಈ ವೇಳೆ ಆಕೆಯ ಗೆಳತಿಯೊಬ್ಬಳು ಶಾಲೆಯ ಮುಖ್ಯೋಧ್ಯಾಯರಿಗೆ ಮಾಹಿತಿ ನೀಡಿದ್ದಾಳೆ. ಇದರಂತೆ ಶಿಕ್ಷಕಿ ಹಾಗೂ ಶಾಲೆಯಲ್ಲಿ ಅಡುಗೆ ಮಾಡುವ ಮಹಿಳೆಯನ್ನು ಕಳುಹಿಸಿಕೊಟ್ಟಿದ್ದಾರೆ. ಬಾಲಕಿ ಗರ್ಭಿಣಿಯಾಗಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ.

ತೀವ್ರವಾಗಿ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಶಿಕ್ಷಕಿ ಹಾಗೂ ಅಡುಗೆ ಮಾಡುವ ಮಹಿಳೆ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲೇ ಆಕೆಗೆ ಹೆಣ್ಣು ಮಗು ಜನಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin