ಶಾಸಕರನ್ನು ಅಪಹರಿಸಿದ ಆರೋಪದಲ್ಲಿ ಶಶಿಕಲಾ, ಪಳನಿಸ್ವಾಮಿ ವಿರುದ್ಧ ಎಫ್ಐಆರ್
ಚೆನ್ನೈ, ಫೆ.15-ಶಾಸಕರನ್ನು ಅಪಹರಿಸಿ ಅಕ್ರಮವಾಗಿ ರೆಸಾರ್ಟ್ನಲ್ಲಿ ಬಂಧನದಲ್ಲಿಟ್ಟ ಆರೋಪದ ಮೇಲೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮತ್ತು ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಚಿವ ಯಡಪ್ಪಾಡಿ ಪಳನಿಸ್ವಾಮಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಶಾಸಕ ಸರವಣನ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಇವರಿಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಶಶಿಕಲಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >