ಶಾಸಕರ ನಿಧಿಯಿಂದ ಕೊಳವೆ ಬಾವಿ

narayanaswamy

ವಿಜಯಪುರ, ಆ.19- ಕುಡಿಯುವ ನೀರಿನ ಬವಣೆ ನೀಗಿಸುವ ಸಲುವಾಗಿ ಶಾಸಕರ ನಿಧಿಯಿಂದ ಪಟ್ಟಣದಲ್ಲಿ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ ಎಂದು ಟೌನ್ ಜೆಡಿಎಸ್ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು. 20ನೇ ವಾರ್ಡ್‍ನಲ್ಲಿ ಇಂದಿರಾ ನಗರದ ಶಾಲೆಯ ಬಳಿ ಶಾಸಕರ ನಿಧಿಯಿಂದ ಕೊಳವೆ ಬಾವಿ ಕೊರೆಯುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ತಾಲ್ಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸೀಫ್ ಮಾತನಾಡಿ, ಸುಮಾರು 15 ಲಕ್ಷ ರೂಗಳ ವೆಚ್ಚದಲ್ಲಿ 1 ನೇ ವಾರ್ಡ್, 10 ನೇ ವಾರ್ಡ್ ಹಾಗೂ 20 ನೇ ವಾರ್ಡ್‍ಗಳಲ್ಲಿ 3 ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ ಎಂದು ತಿಳಿಸಿದರು. ಪುರಸಭಾ ಸದಸ್ಯ ಕೇಶವಪ್ಪ, ಮಾಜಿ ಸದಸ್ಯೆ ವಿಜಯರಾಣಿ, ಟೌನ್ ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ಮುನಿರಾಜು, ವಾರ್ಡ್‍ನ ಇಮ್ರಾನ್, ಆಸೀಫ್ ಖಾನ್, ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin