ಶಾಸಕರ ಭವನದ ಕೊಠಡಿಗಳ ಬಾಡಿಗೆ ಹೆಚ್ಚಿಸಲು ನಿರ್ಧಾರ

Vidhanasoudha--01

ಬೆಂಗಳೂರು,ಜು.8- ಎಂಟು ವರ್ಷಗಳ ನಂತರ ವಿಧಾನಸಭೆ ಸಚಿವಾಲಯ ಶಾಸಕರ ಭವನದ ಕೊಠಡಿಗಳ ಬಾಡಿಗೆ ಏರಿಸಲು ನಿರ್ಧರಿಸಿದೆ. ಶಾಸಕರು ಈ ಕೊಠಡಿಗಳಿಗೆ ಮಾರುಕಟ್ಟೆ ಬೆಲೆಗಿಂತ ಅತಿ ಕಡಿಮೆ ಬಾಡಿಗೆ ಪಾವತಿಸುತ್ತಿದ್ದಾರೆ. ನಗರದ ಮಧ್ಯ ಭಾಗದಲ್ಲಿರುವ ಶಾಸಕರ ಭವನಕ್ಕೆ ಇನ್ನು ಮುಂದೆ ತಿಂಗಳಿಗೆ ಬಾಡಿಗೆ ದರ ಏರಿಕೆಯಾಗಲಿದೆ. 2009 ರಲ್ಲಿ ಬಾಡಿಗೆ ದರ ಪರಿಷ್ಕರಣೆ ನಡೆಸಲಾಗಿತ್ತು. ಸದ್ಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ತಮ್ಮ ಕೊಠಡಿಗೆ 500 ರೂ. ಬಾಡಿಗೆ ನೀಡುತ್ತಿದ್ದರು. ಮಾಜಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ದಿನದ ಲೆಕ್ಕದಲ್ಲಿ 100 ರೂ. ಹಾಗೂ ತಿಂಗಳಿಗೆ 1 ಸಾವಿರ ರೂ. ಪಾವತಿಸುತ್ತಿದ್ದಾರೆ. ಈಗ ಬಾಡಿಗೆ ಏರಿಸಿದ ನಂತರ ಎಂಎಲ್‍ಎ ಮತ್ತು ಎಂಎಲ್‍ಸಿಗಳಿಗೆ ಒಂದು ಸಾವಿರ ರೂ. ಮತ್ತು ಮಾಜಿ ಶಾಸಕರ ಅತಿಥಿ ಕೊಠಡಿಗಳಿಗೆ ದಿನಕ್ಕೆ 200 ರೂ. ಹಾಗೂ ತಿಂಗಳಿಗೆ 2 ಸಾವಿರ ರೂ. ನೀಡಬೇಕಾಗುತ್ತದೆ.  ನಿರ್ವಹಣಾ ವೆಚ್ಚ ಏರಿಕೆಯಾಗುತ್ತಿರುವ ಕಾರಣ ಬಾಡಿಗೆ ದರವನ್ನು ಏರಿಸಲಾಗಿದೆ ಎಂದು ವಿಧಾನಸಭೆ ಸಚಿವಾಲಯ ತಿಳಿಸಿದೆ.

ಏನೇನಿದೆ..?

ಶಾಸಕರ ಭವನದಲ್ಲಿ ಯಾವುದೇ ಸವಲತ್ತುಗಳಿಗೂ ಕೊರತೆಯಿಲ್ಲ. ಇಲ್ಲಿ ಆಯುರ್ವೇದಿಕ್ ಮಸಾಜ್ ಪಾರ್ಲರ್, ಜಿಮ್, ಫುಡ್ ಕೋರ್ಟ್, ಪ್ರೆಸ್ ಮೀಟ್ ಮಾಡಲು ಸೆಮಿನಾರ್ ಹಾಲ್ ಜೊತೆಗೆ 24 ಗಂಟೆಗಳ ಕಾಲ ಬಿಸಿ ನೀರಿನ ವ್ಯವಸ್ಥೆ ಇದೆ. ಮಾಜಿ ಮತ್ತು ಹಾಲಿ ಶಾಸಕರು ಇಲ್ಲಿ ಕೊಠಡಿ ಪಡೆಯಲು ಅರ್ಹರಾಗಿದ್ದಾರೆ. ಬೆಂಗಳೂರಿನ ಹೊರಗಿನ ಶಾಸಕರಿಗೆ ಕೊಠಡಿ ನೀಡಲು ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಕೆಲವು ಸಚಿವರು ಕೂಡ ಶಾಸಕರ ಭವನದಲ್ಲಿ ಕೊಠಡಿಗಳನ್ನು ಪಡೆದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಸಿ.ಟಿ.ರವಿ ಕೂಡ ಸಚಿವರಾಗಿದ್ದಾಗ ಶಾಸಕರ ಭವನದ ಕೊಠಡಿಗಳನ್ನು ಬಳಸುತ್ತಿದ್ದರು. ಶಾಸಕರ ಭವನದಲ್ಲಿ ಶಾಸಕರಲ್ಲದವರು ಬಂದು ವಾಸ್ತವ್ಯ ಹೂಡುವುದನ್ನು ತಪ್ಪಿಸಲು ಇದು ಸಹಾಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಜಿ ಶಾಸಕರುಗಳ ಹೆಸರು ಹೇಳಿಕೊಂಡು ಯಾರು ಬೇಕಾದರೂ ಬಂದು ಉಳಿದುಕೊಳ್ಳುತ್ತಿದ್ದರು . ಅದಕ್ಕೆ ಈಗ ಬ್ರೇಕ್ ಬಿದ್ದಂತಾಗಿದೆ.

ಶಾಸಕರ ಭವನದ ಕೊಠಡಿಗಳಲ್ಲಿ ಶಾಸಕರಿಗಿಂತ ಅವರ ಸಹವರ್ತಿಗಳು ಮತ್ತು ಬೆಂಬಲಿಗರೇ ಹೆಚ್ಚಾಗಿರುತ್ತಾರೆ. ಹೀಗಾಗಿ ಇದರ ವಿರುದ್ಧವು ಕ್ರಮ ಕೈಗೊಳ್ಳಲು ಕೆಲ ನಿಯಮ ರೂಪಿಸುವುದಾಗಿ ಹೇಳಿದ್ದಾರೆ. ಶಾಸಕರು ಮತ್ತು ಎಂಎಲ್‍ಸಿಗಳ ಹೆಸರು ಹೇಳಿಕೊಂಡು ಕೊಠಡಿ ಪಡೆಯುವುದು ಕಾನೂನು ಬಾಹಿರ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಠಡಿಗಳೆಷ್ಟು :

ಶಾಸಕರ ಭವನದಲ್ಲಿ ಒಟ್ಟು 365 ಕೊಠಡಿಗಳಿವೆ. ಅದರಲ್ಲಿ 250 ರೂಂಗಳು ಶಾಸಕರಿಗೆ, 75 ವಿಧಾನ ಪರಿಷತï ಸದಸ್ಯರಿಗೆ, ಉಳಿದ 15 ಕೊಠಡಿಗಳು ಅತಿಥಿಗಳಿಗೆ ಮೀಸಲಾಗಿವೆ.
ಎರಡು ಕೊಠಡಿ ಇದ್ದರೆ ಅದಕ್ಕೆ 500 ರೂ. 1 ಕೊಠಡಿಗೆ 100 ರೂ. ಹಾಗೂ ಮಾಜಿ ಶಾಸಕ ಮತ್ತು ವಿಧಾನ ಪರಿಷತï ಸದಸ್ಯರಿಗೆ ದಿನಕ್ಕೆ 200 ರೂ. ನಿಗದಿ. ಹಾಗೇ ಅತಿಥಿಗಳಿಗೆ ತಿಂಗಳಿಗೆ 1 ಸಾವಿರ ರೂ. ಬಾಡಿಗೆ ಪ್ರಸ್ತುತ ವಿಧಿಸಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin