ಶಾಸಕ ಕಾಗೆ ಕುಟುಂಬಕ್ಕೆ ‘ಮಹಾ’ ರಕ್ಷಣೆ..?

3

ಬೆಳಗಾವಿ,ಜ.10- ಕಾಗವಾಡ ಶಾಸಕ ರಾಜು ಕಾಗೆ ಕುಟುಂಬದ ಅಟ್ಟಹಾಸದ ಪರಿ ದೃಶ್ಯಾವಳಿ ಸಹಿತ ರಾಜ್ಯಾದ್ಯಂತ ಪ್ರಸಾರವಾಗಿ ಎಫ್‍ಐಆರ್ ದಾಖಲಾಗಿ 24 ಗಂಟೆ ಕಳೆದರೂ ಇನ್ನೂ ಆರೋಪಿಗಳ ಬಂಧನವಾಗದಿರುವುದು ಆಶ್ಚರ್ಯ ಮೂಡಿಸಿದೆ.ಈ ನಡುವೆ ಕುಟುಂಬಕ್ಕೆ ಬಿಜಿಪಿ ಆಡಳಿತದ ರಾಜ್ಯವೊಂದು ಆಸರೆ ನೀಡಿದೆ ಎಂಬ ಗುಸುಗುಸು ಸಹ ಇಂದು ಬೆಳಗ್ಗಿನಿಂದ ಬಲವಾಗಿ ಹಬ್ಬಿದೆ. ಶಾಸಕರ ಸಹಿತ 13 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಎಲ್ಲರೂ ತಲೆಮರೆಸಿಕೊಂಡಿದ್ದು ಪತ್ತೆ ಹಚ್ಚಲು ಪೊಲೀಸರ ಜಾಲ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರು ತಲೆಮರೆಸಿಕೊಂಡಿದ್ದು ಮುಂಬೈಗೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಅವರ ಸುಳಿವು ಇದ್ದರೂ ಸ್ಥಳೀಯ ಪೊಲೀಸರು ಸಹಾಯಕರಾಗಿ ಕೈಕಟ್ಟಿ ಕುಳಿತಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ. ಆಯುಧಗಳ ಸಹಿತ ಮನೆಯೊಳಗೆ ನುಗ್ಗಿ ಕಕ್ಕುಲಾತಿ ಮರೆತು ವಿಪರೀತ ಥಳಿಸಿದ ಕಾಗೆ ಕುಟುಂಬದ ಮಾಹಿತಿ ಇದ್ದರೂ ಪೊಲೀಸರು ಅವರನ್ನು ಬಂಧಿಸಲು ಮಾಡುತ್ತಿರುವ ವಿಳಂಬ ರಕ್ಷಣಾತಂತ್ರ ಎಂದು ಸಾರ್ವಜನಿಕ ವಲಯದಲ್ಲಿ ಗುಸುಗುಸು ಹಬ್ಬಿದೆ.

ಬಂಧನದ ಮಜುಗುರದಿಂದ ಪಾರು ಮಾಡಿ ಶಾಸಕರ ಕುಟುಂಬಕ್ಕೆ ನಿರೀಕ್ಷಣಾ ಜಾಮೀನು ಕೊಡಿಸಲು ಪೊಲೀಸರೆ ಸಹಕಾರಕ್ಕೆ ಯತ್ನಿಸುತ್ತಿದ್ದಾರೆ ಎಂದು ಸುತ್ತಲ ಹಳ್ಳಿಗಳಲ್ಲಿ ಸುದ್ದಿ ಹರಡಿದೆ.
ಇನ್ನೊಂದು ಮೂಲಗಳ ಪ್ರಕಾರ ಮೂಲಗಳ ಪ್ರಕಾರ ಕಾಗೆ ಕುಟುಂಬದ ಎಲ್ಲರೂ ಅವರ ತೋಟದ ಮನೆಯಲ್ಲಿ ವಾಸವಿದ್ದಾರೆ ಎನ್ನಲಾಗುತ್ತಿದೆ. ಆದರೂ ಕಾಗವಾಡ ಪೊಲೀಸರು ವಶಕ್ಕೆ ಪಡೆಯುವ ಗೋಜಿಗೆ ಹೋಗಿಲ್ಲ. ಶಾಸಕ ರಾಜು ಕಾಗೆ ಕಾರು ಚಾಲಕ ಇಲ್ಲವೇ ಅವರ ಸೇವಕರಲ್ಲಿ ಒಬ್ಬರನ್ನು ವಶಕ್ಕೆ ಪಡೆಯುವ ತಯ್ಯಾರಿ ಸದ್ಯ ಪೊಲೀಸರು ನಡೆಸಿರುವ ಮಾಹಿತಿ ಲಭ್ಯವಾಗುತ್ತಿದೆ.ಶಾಸಕ ರಾಜು ಕಾಗೆ ಸಹಿತ 13 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಎಲ್ಲರೂ ತಲೆಮರೆಸಿಕೊಂಡಿದ್ದು ಪತ್ತೆ ಹಚ್ಚಲು ಪೊಲೀಸರ ಜಾಲ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin