ಶಾಸಕ ಸ್ಥಾನಕ್ಕೆ ರಾಜೀನಾಮೆ ವಿ.ಶ್ರೀನಿವಾಸ ಪ್ರಸಾದ್ ರಾಜೀನಾಮೆ..?

Spread the love

v--srinivas--prasad--mla
ನಂಜನಗೂಡು, ಸೆ 09 – ರಾಜ್ಯದ ಹಿರಿಯ ರಾಜಕಾರಣಿ ಕೇಂದ್ರ ಮತ್ತು ರಾಜ್ಯದ ಮಾಜಿ ಸಚಿವರು ಸ್ಥಳೀಯ ಶಾಸಕರು ಆದ ವಿ.ಶ್ರೀನಿವಾಸ ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇವರ ಈ ನಿರ್ಧಾರ ಅಚಲವಾಗಿದ್ದು ಇನ್ನು 2-3 ದಿನಗಳಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೆಡ್ಡು ಒಡೆಯಲು ಎಲ್ಲಾ ತಂತ್ರಗಾರಿಕೆಯನ್ನು ರೂಪಿಸಿದ್ದಾರೆಂದು ತಿಳಿದುಬಂದಿದೆ.

ಸುಮಾರು 40ವರ್ಷಗಳಿಂದಲೂ ರಾಜಕೀಯ ಹಿರಿತನದೊಂದಿಗೆ ಅಪಾರ ಅನುಭವ ಹಾಗೂ ದಕ್ಷ, ಪ್ರಾಮಾಣಿಕ ರಾಜಕಾರಣಿಯಾಗಿರುವ ವಿ.ಶ್ರೀನಿವಾಸ್ ಪ್ರಸಾದ್ ರಾಷ್ಟ್ರ ಮತ್ತು ರಾಜ್ಯದಲ್ಲಿ ಹಲವಾರು ಹುದ್ದೆಗಳನ್ನು ಹೊಂದಿ ಅಪಾರ ಅನುಭವಗಳ ಜೊತೆಗೆ ರಾಜಕೀಯ ಮುತ್ಸದಿಯಾಗಿದ್ದು ಯಾವುದೇ ಕಪ್ಪು ಚುಕ್ಕೆಗಳಿಲ್ಲದೆ ಶುದ್ಧ ರಾಜಕಾರಣಿಯಾಗಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಕಂದಾಯ ಸಚಿವರಾಗಿ ಕ್ರಾಂತೀಕಾರಿಕ ಬದಲಾವಣೆಗಳ ಮೂಲಕ ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರನ್ನು ಯಾವುದೇ ಕಾರಣವಿಲ್ಲದೆ ಸಂಪುಟದಿಂದ ಕೈ ಬಿಟ್ಟಿರುವುದನ್ನು ತೀವ್ರವಾಗಿ ಖಂಡಿಸಿ ಇದರಿಂದ ಮನನೊಂದು ಸಿದ್ದರಾಮಯ್ಯನವರ ಸರ್ವಾಧಿಕಾರ ಧೋರಣೆಯ ಬಗ್ಗೆ ಸೆಡ್ಡು ಒಡೆದು ಆತನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವವರೆಗೆ ಆತನ ಮುಖ ನೋಡವುದಿಲ್ಲವೆಂದು ಶಪಥ ಮಾಡಿರುವುದು ಇತಿಹಾಸ.

ಕಳೆದ 3ತಿಂಗಳಿಂದ ರಾಜಕೀಯ ವೇದನೆಯನ್ನು ಅನುಭವಿಸುತ್ತಿರುವ ಶ್ರೀನಿವಾಸ ಪ್ರಸಾದ್‍ರವರು ತಮ್ಮ ಹಿತೈಷಿಗಳ ಮತ್ತು ಅಭಿಮಾನಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿರುತ್ತಾರೆ. ಇದುವರೆವಿಗೂ ಕಾಂಗ್ರೇಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲೀ ಹಾಗೂ ದೆಹಲಿ ಕಾಂಗ್ರೇಸ್ ವರಿಷ್ಟರಾಗಲೀ ಯಾರು ಕೂಡ ವಿ.ಶ್ರೀನಿವಾಸ ಪ್ರಸಾದ್‍ರವರ ಮನವೊಲಿಸಲು ಆಗಮಿಸದೆ ಇರುವುದು ಪ್ರಸಾದ್‍ರವರಿಗೆ ಮತ್ತಷ್ಟು ಕೆರಳಿಸಿದ್ದು ಕಾಂಗ್ರೇಸ್ ಪಕ್ಷದಿಂದ ದೂರ ಉಳಿದು ಈ ಪಕ್ಷದ ಸಾರಥ್ಯವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಾಠಕಲಿಸಲು ತೀರ್ಮಾನಿಸಿ ಮತ್ತು ಮುಂಬರುವ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ತಂತ್ರಗಾರಿಕೆಯೊಂದಿಗೆ ಈ ತಿಂಗಳ 14/09/2016ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಈ ಸಂಬಂಧ ಮೈಸೂರಿನ ರೆಸಾರ್ಟ್ ಒಂದರಲ್ಲಿ ತಮ್ಮ ಹಿತೈಷಿಗಳ ಮತ್ತು ಬೆಂಬಲಿಗರ ಸಭೈ ನಡೆಸಿ ಅಂತಿಮವಾಗಿ ರಾಜೀನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷರು ಹಾಗೂ ವರಿಷ್ಟರಿಗೆ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆಂದು ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.  ಸಂಸಧ ಧೃವನಾರಾಯಣ್‍ರವರ ಸಂಧಾನಕ್ಕೆ ಒಪ್ಪದ ಪ್ರಸಾದ್ಚಾಮರಾಜನಗರ ಕ್ಷೇತ್ರದ ಜನಪ್ರಿಯ ಕಾಂಗ್ರೇಸ್ ಸಂಸದ ಹಾಗೂ ಶ್ರೀನಿವಾಸ ಪ್ರಸಾದ್‍ರ ಹಿತೈಷಿಯಾಗಿರುವ ಸಂಸದ ಆರ್.ಧೃವನಾರಯಣ್‍ರವರು ಶ್ರೀನಿವಾಸ ಪ್ರಸಾದ್‍ರವರ ನಿವಾಸಕ್ಕೆ ತೆರಳಿ ಕಾಂಗ್ರೇಸ್ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಾರದೆಂದು ಪರಿಪರಿಯಾಗಿ ವಿನಂತಿಸಿಕೊಂಡರೂ ಸಂಸಧರ ಮಾತಿಗೆ ಕಿವಿಕೊಡದ ಪ್ರಸಾದ್‍ರವರು, ಧೃವ ನೀನು ಈ ವಿಚಾರದಲ್ಲಿ ಸುಮ್ಮನೆ ಇದ್ದು ಬಿಡು ಎಂದು ಖಡಾ ಖಂಡಿತವಾಗಿ ತಿಳಿಸಿದರು ಎನ್ನಲಾಗಿದೆ.

ಮಾಜಿ ಪ್ರಧಾನಿ ದೇವೇಗೌಡ, ಬಿ,ಎಸ್.ಯಡಿಯೂರಪ್ಪರವರಿಂದ ಶ್ರೀನಿವಾಸ ಪ್ರಸಾದ್‍ರವರಿಗೆ ಗ್ರೀನ್ ಸಿಗ್ನಲ್ಶಾಸಕ ವಿ.ಶ್ರೀನಿವಾಸ ಪ್ರಸಾದ್‍ರವರು ಸಚಿವ ಸ್ಥಾನ ಕೈ ತಪ್ಪಿದ ದಿನದಿಂದ ಅವರು ಸುಮ್ಮನೆ ಕೂರಲಿಲ್ಲ ಬದಲಿಗೆ ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ನಾಯಕರುಗಳೊಂದಿಗೆ ಸತತವಾದ ಸಂಪರ್ಕ ಮತ್ತು ಸಲಹೆಗಳನ್ನು ಪಡೆದುಕೊಂಡಿದ್ದು ಆ ಪ್ರಕಾರವಾಗಿ ಇನ್ನೆರಡು-ಮೂರು ದಿನಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ನಂತರ 6ತಿಂಗಳೊಳಗೆ ಸ್ವತಂತ್ರ ಅಭ್ಯರ್ಥಿಯಾಗಿ ನಂಜನಗೂಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಂಡಿರುತ್ತಾರೆ.

ಈ ಸಂಬಂಧ ಜೆ.ಡಿ.ಎಸ್.ನ ವರಿಷ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರವರೊಂದಿಗೆ ಎಲ್ಲಾ ಮಾತುಕತೆ ನಡೆಸಿದ್ದು ಇವರು ಸ್ವತಂತ್ರ ಅಭ್ಯರ್ಥಿಯಾದರೆ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್.ನಿಂದ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ನಿಲ್ಲಿಸದಿರಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.ಶ್ರೀನಿವಾಸ ಪ್ರಸಾದ್‍ರವರಿಗೆ ಬೆಂಬಲ ವ್ಯಕ್ತಪಡಿಸಿ ಅವರನ್ನು ಅತ್ಯಾಧಿಕ ಮತಗಳಿಂದ ಗೆಲ್ಲಿಸಿ ಕಾಂಗ್ರೇಸ್ ಪಕ್ಷಕ್ಕೆ ಹಿನ್ನಡೆ ಮಾಡುವುದು ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್‍ರವರನ್ನು ಚುನಾವಣೆ ಕಣಕ್ಕೆ ಇಳಿಸದೆ ಅವರನ್ನು ಚುನಾವಣೆ ಪ್ರಚಾರದ ಸಮಿತಿಯ ಮುಖಂಡರಾಗಿ ಮಾಡಿಕೊಂಡು ಚುನಾವಣೆಯ ಲಾಭ ಪಡೆದುಕೊಂಡು ಹಾಗೂ ಕಾಂಗ್ರೇಸ್ ಪಕ್ಷವನ್ನು ಹಿಮ್ಮೆಟಿಸಲು ಈ ಇಬ್ಬರು ನಾಯಕರು ತಂತ್ರಗಾರಿಕೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಎಲ್ಲದರ ಹಿಂದೆ ರಾಜ್ಯದ ಪ್ರಭಾವಿ ಮಠಾಧೀಶರೊಬ್ಬರ ಮಾರ್ಗದರ್ಶನದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆದಿವೆ ಎಂದು ಖಚಿತ ಮೂಲಗಳಿಂದ ದೃಢಪಟ್ಟಿದೆ. ಒಟ್ಟಾರೆ ನಂಜನಗೂಡು ಕ್ಷೇತ್ರದಲ್ಲಿ ದಿಡೀರ್ ರಾಜಕೀಯ ಬೆಳವಣಿಗೆಗಳು ಇಷ್ಟರಲ್ಲೆ ಪ್ರಾರಂಭವಾಗಲಿದ್ದು ಕ್ಷೇತ್ರದ ಜನತೆ ಈ ಹೊಸ ಆಶ್ಚರ್ಯಕರ ಬೆಳವಣಿಗೆಗೆ ಯಾವ ರೀತಿ ಸ್ವಾಗತ ಮಾಡುತ್ತಾರೆಂಬುದು ಕುತೂಹಲದಿಂದ ಕ್ಷೇತ್ರದ ಜನತೆ ಎದುರು ನೋಡುತ್ತಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin