ಶಿಕ್ಷಣ ಕೊಡಿಸಿ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡಿ

Spread the love

beluru
ಬೇಲೂರು, ಅ.26- ಸವಿತಾ ಸಮಾಜದವರು ಶಿಕ್ಷಣ ಕೊಡಿಸುವ ಮೂಲಕ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ ಹೇಳಿದರು.ಸವಿತಾ ಸಮಾಜ ಸಂಘ ಹಾಗೂ ಸವಿತಾ ಸಮಾಜ ಮಹಿಳಾ ಮಂಡಳಿ ಏರ್ಪಡಿಸಿದ್ದ ಸೌಂದರ್ಯವರ್ಧಕ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಮಂತಿಕೆಯಿಂದ ಎಲ್ಲವನ್ನು ಪಡೆಯಲು ಸಾಧ್ಯವಿಲ್ಲ, ವಿದ್ಯೆಯಿಂದ ಮಾತ್ರ ಎಲ್ಲವನ್ನೂ ಪಡೆಯುವ ಅವಕಾಶವಿದೆ. ಸರ್ಕಾರ ಮಹಿಳೆಯರಿಗೆ ವೃತ್ತಿಕೌಶಲ್ಯತೆ ತರಬೇತಿಗೆ ಸಾವಿರಾರು ಕೋಟಿ ಹಣವನ್ನು ವ್ಯಯ ಮಾಡುತ್ತಿರುವ ಕಾರಣ ಸಂಘವು ಸರ್ಕಾರದ ಹಣವನ್ನು ಬಳಕೆ ಮಾಡಿಕೊಂಡು ಉತ್ತಮ ಬದುಕಿಗೆ ಮುಂದಾಗಬೇಕು ಎಂದು ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಬಿ.ಸಿ.ಮಂಜುನಾಥ್ ಮಾತನಾಡಿ, ವೃತಿಯಲ್ಲಿ ಹೆಚ್ಚಿನ ಕೌಶಲ್ಯತೆಯನ್ನು ಪಡೆಯಲು ವೃತಿಪರ ತರಬೇತಿಗಳ ಅವಶ್ಯಕತೆ ಇದ್ದು, ಅಧುನಿಕ ಸಲಕರಣೆಗಳು ಮತ್ತು ಸೌಂದರ್ಯ ವರ್ಧಕಗಳನ್ನು ಉಪಯೋಗಿಸಿ ಹೆಚ್ಚಿನ ಆದಾಯ ಪಡೆಯ ಬಹುದಾಗಿದೆ. ಕುಲ ಕಸಬುಗಳನ್ನು ಗೌರವಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು ಎಂದರುತಾಲ್ಲೂಕು ಸವಿತಾ ಸಮಾಜ ಸಂಘದ ಅಧ್ಯಕ್ಷ ನರಸಿಂಹಸ್ವಾಮಿ, ಹಾಸನ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್, ಜಿಪಂ ಮಾಜಿ ಅಧ್ಯಕ್ಷೆ ಹೇಮಾವತಿ ಮಂಜುನಾಥ್, ಪುರಸಭಾ ಸದಸ್ಯರಾದ ಜಿ.ಶಾಂತಕುಮರ್, ಟಿ.ಎ.ಶ್ರೀನಿಧಿ, ಸವಿತಾ ಸಮಾಜದ ಮುಖಂಡರಾದ ರಾಜು, ಯೋಗೇಶ್, ರವಿ, ನಾರಾಯಣ್ ಇನ್ನಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin