ಶಿಕ್ಷಣ ನೀಡುವ ವ್ಯವಸ್ಥೆ ಬದಲಾವಣೆ ಅನಿವಾರ್ಯ

TURUVEKERE

ತುರುವೇಕೆರೆ, ಸೆ.9- ಶಿಕ್ಷಣ ಮತ್ತು ಶಿಕ್ಷಕ ಎರಡೂ ಒಂದೇ, ಆದರೆ ಇಂದು ಶಿಕ್ಷಣ ನೀಡುವ ವ್ಯವಸ್ಥಾ ಕ್ರಮಗಳು ಬದಲಾಗ ಬೇಕಾದ ಅನಿವಾರ್ಯತೆ ಇದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.ಪಟ್ಟಣದ ಕೆ.ಹಿರಣಯ್ಯ ಬಯಲು ರಂಗಮಂದಿರದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಹಾಗು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ದಿನಾಚರಣೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದದರು.
ಉತ್ತಮ ಶಿಕ್ಷಕರೆಂದು ನಿರ್ಧರಿಸಿ ಪ್ರಶಸ್ತಿಯನ್ನು ಕೊಡುವುದು ಶಿಕ್ಷಣ ಇಲಾಖೆ ಅಥವಾ ಅಧಿಕಾರಿಗಳಾಗಲಿ ಮಕ್ಕಳೇ ನಿಜವಾದ ಮೌಲ್ಯ ಮಾಪಕರು ಎಂದರು.
ವಿರಕ್ತ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ನಾಡಿನ ಆಸ್ತಿ ಮಕ್ಕಳು, ಭವ್ಯ ಭಾರತ ನಿರ್ಮಿಸ ಬೇಕಿದ್ದರೆ ಅದು ಶಿಕ್ಷಕರಿಂದ ಮಾತ್ರ ಸಾದ್ಯ. ಪ್ರತಿಯೊಂದು ಮಗುವನ್ನೂ ತನ್ನ ಮಕ್ಕಳಂತೆ ಕಂಡು ಸದೃಢ ರಾಷ್ಟ್ರ ನಿರ್ಮಿಸುವಂತೆ ಶಿಕ್ಷಕರಿಗೆ ಕರೆ ನೀಡಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿದ್ದ ಡಾ.ರಾಧಾಕೃಷ್ಣನ್ ಅವರು ರಾಷ್ಟ್ರದ ಅತ್ಯುನ್ನತ ಪದವಿ ಅಲಂಕರಿಸಿದ್ದರು. ಶಿಕ್ಷಕರಾದ ನೀವು ಇಂದಿನ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸುವುದರ ಜೊತೆಗೆ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಹಾಗು ಉತ್ತಮ ವ್ಯಕ್ತಿತ್ವ ಬೆಳೆಸುವ ಶಿಕ್ಷಣ ನೀಡಿ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ದೇಶ ಕಟ್ಟು ಮಹತ್ವದ ಕಾರ್ಯ ಶಿಕ್ಷಕರದ್ದಾಗಿದೆ. ಶಿಕ್ಷಕರು ತಮ್ಮ ಶಾಲೆಯ ಸ್ವಚ್ಛತೆ, ಪರಿಸರ, ಕಾಪಾಡಿಕೊಳ್ಳುವಂತೆ ಸೂಚಿಸಿ ಇದೊಂದು ಐತಿಹಾಸಿ ಕಾರ್ಯ ಕ್ರಮವೆಂದು ಬಣ್ಣಿಸಿದರು. ಬದ್ರಿಕಾಶ್ರಮದ ಓಂಕಾರಾನಂದಾಜೀ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನರವಿಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮಲತಾಶಿವರಾಜ್, ಉಪಾಧ್ಯಕ್ಷೆ ಕೆಂಪಮ್ಮ, ತಾಪಂ ಸದಸ್ಯರುಗಳಾದ ನಂಜೇಗೌಡ, ತೀರ್ಥಕುಮಾರಿ, ಮಹಾಲಿಂಗಪ್ಪ, ಮುಖಂಡರುಗಳಾದ ರಮೇಶ್ ಗೌಡ, ಬುಗಡನಹಳ್ಳಿ ಕೃಷ್ಣಮೂರ್ತಿ, ಎನ್.ಆರ್.ಜಯರಾಮ್, ಬಿಇಒ ರಂಗಧಾಮಯ್ಯ, ತಹಶೀಲ್ದಾರ್ ಶಿವಲಿಂಗಮೂರ್ತಿ, ಇ.ಒ.ಆನಂದಕುಮಾರ್, ಬಿ.ಆರ್.ಸಿ.ಉಮೇಶ್‍ಗೌಡ ಮತ್ತಿತರರಿದ್ದರು.

 

► Follow us on –  Facebook / Twitter  / Google+

Sri Raghav

Admin