ಶಿರಾ ಬಳಿ ಲಾರಿ-ಇನ್ನೋವಾ ಅಪಘಾತ : ವಾರಸುದಾರರಿಗೆ ಶವಗಳ ಹಸ್ತಾಂತರ

Spread the love

Car-Accident-v

ತುಮಕೂರು,ಏ.25-ಮುಂಬೈಗೆ ತೆರಳುತ್ತಿದ್ದ ಇನೋವಾ ಕಾರಿಗೆ ಅತಿವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಇಂದು ಬೆಳಗ್ಗೆ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.   ನಿನ್ನೆ ಸಂಜೆ ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು ಜಿಲ್ಲೆ ಶಿರಾ ಬಳಿಯ ಮಾಳಂಗಿ ಬಳಿ ಸೇಲಂನಿಂದ ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ ಇನ್ನೋವಾ ಕಾರಿನಲ್ಲಿ ತಮಿಳುನಾಡು ಮೂಲದವರು ತೆರಳುತ್ತಿದ್ದರು. ಈ ವೇಳೆ ಎದುರಿಗೆ ಯಮನಂತೆ ಅತಿವೇಗವಾಗಿ ಬಂದ ಲಾರಿ ಈ ಕಾರಿಗೆ ಅಪ್ಪಳಿಸಿ ಉರುಳಿಬಿದ್ದಿದೆ.

ಪರಿಣಾಮವಾಗಿ ಕಾರಿನಲ್ಲಿದ್ದ ಮೊಹಮ್ಮದ್ ಸಾಧಿಕ್(52), ಜಾಫರ್(26) ಮತ್ತು ಸಿದ್ದಿಕ್(50) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು , ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಾಳುಗಳಿಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.   ಇಂದು ಬೆಳಗ್ಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

  ಸಂಚಾರ ಅಸ್ತವ್ಯಸ್ತ: ನಿನ್ನೆ ಸಂಜೆಯಿಂದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನ ಸಂಚಾರದಲಿ ಅಸ್ತವ್ಯಸ್ತ ಉಂಟಾಗಿತ್ತು. ರಸ್ತೆ ಮಧ್ಯದಲ್ಲೇ ಲಾರಿ ಉರುಳಿ ಬಿದ್ದಿದ್ದರಿಂದ ಅದನ್ನು ತೆರವುಗೊಳಿಸುವವರೆಗೂ ವಾಹನ ಸವಾರರು ಪರದಾಡುವಂತಾಯಿತು.   ಸಂಚಾರಿ ಪೊಲೀಸರು ರಾತ್ರಿಯಿಡೀ ಹರಸಾಹಸಪಟ್ಟು ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin