ಶಿವಾಜಿ- ಸರ್ವಜ್ಞ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

Spread the love

16

ಮುದ್ದೇಬಿಹಾಳ,ಫೆ.11- ಸರ್ಕಾರದಿಂದ ಆಚರಿಸಲ್ಪಡುವ ಮಹಾನ್ ನಾಯಕರ ಜಯಂತಿ ಕಾರ್ಯಕ್ರಮಗಳಿಗೆ ವಿವಿಧ ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ತಾವು ಭಾಗವಹಿಸದೆ ಹೆಚ್ಚಾಗಿ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡುವ ಸಂಪ್ರದಾಯ ನಿಲ್ಲಿಸಿ ತಾವೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಹಾನ್ ನಾಯಕರ ಜಯಂತಿ ಕಾರ್ಯಕ್ರಮಗಳಿಗೆ ಗೌರವ ಸಲ್ಲಿಸಬೇಕು ಎಂದು ತಹಸೀಲ್ದಾರ್ ಎಂ.ಎಸ್. ಬಾಗವಾನ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಛೇರಿಯಲ್ಲಿ ನಿನ್ನೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇದೇ 19ರಂದು ಛತ್ರಪತಿ ಶಿವಾಜಿ ಜಯಂತಿ ಹಾಗೂ 20ರಂದು ಸಂತ ಕವಿ ಸರ್ವಜ್ಞ ಜಯಂತಿಯನ್ನು ಆಚರಿಸಲು ಸರ್ಕಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಉಭಯತ್ರರರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

19ರಂದು ನಡೆಯುವ ಶಿವಾಜಿ ಜಯಂತಿ ಅಂಗವಾಗಿ ಪಟ್ಟಣದ ಕಿಲ್ಲಾದಿಂದ ಶಿವಾಜಿ ಭಾವಚಿತ್ರದ ಮೆರವಣಿಗೆಯನ್ನು ಪ್ರಮುಖ ಬೀದಿಗಳಲ್ಲಿ ನಡೆಸಿ ಮಿನಿ ವಿಧಾನಸೌಧದ ಆವರಣದಲ್ಲಿ ಸಾರ್ವಜನಿಕ ಸಮಾರಂಭ ನಡೆಸಲಾಗುತ್ತದೆ. ತಜ್ಞ ಉಪನ್ಯಾಸಕರಿಂದ ಶಿವಾಜಿ ಕುರಿತಾಗಿ ಉಪನ್ಯಾಸ ಕೊಡಿಸಲಾಗುವುದು ಎಂದು ಅವರು ತಿಳಿದರು.20ರಂದು ನಡೆಯುವ ಸಂತ ಕವಿ ಸರ್ವಜ್ಞರ ಜಯಂತಿಯ ಅಂಗವಾಗಿ ಗ್ರಾಮದೇವತೆ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸರ್ವಜ್ಞರ ಭಾವಚಿತ್ರದ ಮೆರವಣಿಗೆ ನಡೆಸಿ ಮಿನಿವಿಧಾನಸೌಧದ ಆವರಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಇದೇ ವೇಳೆ ಜಯಂತಿ ಕಾರ್ಯಕ್ರದಲ್ಲಿ ಗೈರು ಉಳಿದುಕೊಳ್ಳುವ ಸರಕಾರಿ ಇಲಾಖೆಯ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಮಾಹಿತಿ ರವಾನಿಸುವುದಾಗಿಯೂ ಹೇಳಿದರು.ಸಭೆಯಲ್ಲಿ ಅಖಿಲ ಕರ್ನಾಟಕ ಕ್ಷತ್ರೀಯ ಮಹಾಸಭಾದ ತಾಲೂಕಾಧ್ಯಕ್ಷ ಭರತ್ ಭೋಸಲೆ, ಚಂದ್ರಶೇಖರ ಕಲಾಲ, ಉದಯ ರಾಯಚೂರ, ಪರಶುರಾಮ ಪವಾರ, ಸುರೇಶ ಕಲಾಲ, ಕೃಷ್ಣಾ ಪವಾರ, ದೀಪಕ ಕಲಾಲ, ಅಜೇಯ ಭೋಸಲೆ, ರಾಘವೇಂದ್ರ ಘಾಟಗೆ, ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin