ಶೀಘ್ರವೇ ಕಾಮಗಾರಿ, ಹುದ್ದೆ ಭರ್ತಿಗೆ ಆಗ್ರಹಿಸಿ ಮನವಿ

belagam-10

ಬೆಳಗಾವಿ,ಸೆ.27- ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆ ಮಹಾನಗರ ಪಾಲಿಕೆಯ ಮೊದಲ ಹಂತದ 20 ಸ್ಮಾರ್ಟ್ ಸಿಟಿಯಲ್ಲಿ ಆಯ್ಕೆಯಾಗಿ 8 ತಿಂಗಳು ಕಳೆದರೂ ಇಲ್ಲಿವರೆಗೆ ಕಾಮಗಾರಿ ಹಾಗೂ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಶೀಘ್ರವೇ ಕಾಮಗಾರಿ ಹಾಗೂ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ನಿನ್ನೆ ರಾಜೀವ ಟೋಪಣ್ಣವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು.8 ತಿಂಗಳು ಕಳೆದರೂ ಇಲ್ಲಿಯವರೆಗೂ ಕಾಮಗಾರಿಗಳು ಪ್ರಾರಂಭವಾಗದಿರುವುದು ಖಂಡನೀಯ. ವಿನಾಕಾರಣ ಪಾಲಿಕೆ ಸಿಬ್ಬಂದಿ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವಲ್ಲಿ ಕಾಲಹರಣ ಮಾಡುತ್ತಿದ್ದಾರೆಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ ಎಂದು ಮನವಿಯಲ್ಲಿ ತಿಳಿಸಿದರು.ದೇಶದ ಬೇರೆ ಮಹಾನಗರ ಪಾಲಿಕೆಗಳು ಕನ್ಸಲ್ಟಂಟ್ ನೇಮಕ ಮಾಡಿ ಅಭಿವೃದ್ಧಿಯ ಕಾಮಗಾರಿಗಳು, ಡಿಪಿಆರ್ ಮತ್ತು ಆರ್‍ಎಫ್‍ಪಿಗಳನ್ನು ಹೊರ ತಂದು ಈಗಾಲೇ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಸಂಪೂರ್ಣ ಮಾಡಿದ್ದಾರೆ. ಆದರೆ ಇಲ್ಲಿನ ಮಹಾನಗರ ಪಾಲಿಕೆ ಮಾತ್ರ ಕಾಮಗಾರಿ ಪ್ರಾರಂಭಿಸದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.ಶೀಘ್ರವೇ ಪ್ರೊ ರೀಜೆಕ್ಟ್ ಮ್ಯಾನೇಜಮೆಂಟ್ ಕನ್ಸಲ್ಟಂಟ್ ನೇಮಕವಾಗಬೇಕು ಹಾಗೂಕೆಲವು ಸಣ್ಣ ಸಣ್ಣ ಕಾಮಗಾರಿಗಳಿಗೆ ಪ್ರೊ ಜೆಕ್ಟ್ ಮಾನಟರಿಂಗ್ ಕನ್ಸ್‍ಲ್ಟಂಟ್ ಅವಶಕತೆಯಿಲ್ಲ ಆ ಕಾಮಗಾರಿಗಳನ್ನು ತಕ್ಷಣ ಪ್ರಾರಂಭವಾಗಬೇಕು.ಬೆಳಗಾವಿ ಸ್ಮಾರ್ಟ ಸಿಟಿ ಲಿ. ಈ ಕಂಪನಿಯಲ್ಲಿ ಕೇವಲ ನಿರ್ದೇಶಕರು ಮಾತ್ರ ನೇಮಕವಾಗಿದ್ದಾರೆ. ಆದರೆ ಸಿಇಓ ಹುದ್ದೆಯನ್ನು ಇಲ್ಲಿಯವರೆಗೂ ಆಯ್ಕೆ ಮಾಡಿಕೊಂಡಿಲ್ಲ. ಅಲ್ಲದೆ ನಾಲ್ಕು ಪ್ರಮುಖ ಸ್ಮಾರ್ಟ ಸಿಟಿ ಹುದ್ದೆಗಳಾದ ಕಂಪನಿಯ ಕಾರ್ಯದರ್ಶಿ, ಮುಖ್ಯ ಹಣಕಾಸಿನ ಅಧಿಕಾರಿ, ಮುಖ್ಯ ತಾಂತ್ರಿಕ ಅಧಿಕಾರಿಗಳ, ಸಹಾಯಕ ಸಿಬ್ಬಂದಿ ನೇಮಕವಾಗಿಲ್ಲ ಕೂಡಲೇ ಈ ಹುದ್ದೆಗಳನ್ನು ಭರ್ತಿಮಾಡುವ ಕಾರ್ಯನಡೆಸಬೇಕು.
ಸ್ಮಾರ್ಟ ಸಿಟಿ ಚಾಲೆಂಜ್‍ನಲ್ಲಿ ಮಹಾನಗರ ಪಾಲಿಕೆ ಭಾಗವಹಿಸುವ ಮುನ್ನ ಸಾರ್ವಜನಿಕರ ಸಲಹೆ ಪಡೆದುಕೊಂಡಿತ್ತು. ಸ್ಪರ್ಧೆಯಲ್ಲಿ ಆಯ್ಕೆಯಾದ ನಂತರ ಸಾರ್ವಜನಿಕರ ಸಲಹೆ ಪಡೆಯದೆ ಇರುವುದು ಕಾಮಗಾರಿಗಳಿಗೆ ವಿಳಂಭವಾಗಿದೆ. ಕೂಡಲೇ ಸಾರ್ವಜನಿಕರ ಸಲಹಾ ಸಮಿತಿ ರಚನೆ ಮಾಡಿ ಸಾರ್ವಜನಿಕರಿಂದ ಸಲಹೆ ಪಡೆದು ಕೆಲ ಸಣ್ಣ ಸಣ್ಣ ಕಾಮಗಾರಿಗಳನ್ನು ಒಂದುವಾರದಲ್ಲಿ ಪ್ರಾರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಪ್ರತಿಭಟನೆಯಲ್ಲಿ ಶಶಿಕಾಂತ ನಾಯಿಕ, ವಿನಾಯಕ ಪಾಟೀಲ, ಶಿವಾನಂದ ಕಾರಿ, ಸದಾನಂದ ಗುಂಟೆಪ್ಪನವರ, ರೋಹಿತ ಬಡಿಗೇರ, ಮಹೇಶ ಗಾಡಿವಡ್ಡರ, ಬಸವರಾಜ, ವೀರಪಾಕ್ಷಿ ಹಲಕಿ, ಯಶವಂತ, ಮಯೂರು ಮಲ್ಲೂರಕರ, ಅನುಪ ಪರಮೋಜಿ ಸೇರಿದಂತೆ ಮೊದಲಾದವರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin