ಶೀಘ್ರ ಕಾರ್ಖಾನೆ ಆರಂಭಿಸಲು ರೈತರ ಒತ್ತಾಯ

Spread the love

kr--pete

ಕೆ.ಆರ್.ಪೇಟೆ, ಆ.9- ತಾಲ್ಲೂಕಿನಲ್ಲಿ ಮಳೆ ಇಲ್ಲದ ಕಾರಣ ಕಬ್ಬು ಬೆಳೆಗಾರರು ಕಂಗಾಲಾಗಿದ್ದು ಅರೆ ನೀರಾವರಿ ಪ್ರದೇಶದಿಂದ ಕೊಳವೆ ಬಾವಿ ನೀರಿನಲ್ಲಿ ಹೆಚ್ಚು ಕಬ್ಬು ಬೆಳೆಯನ್ನು ಬೆಳೆದಿರುವುದರಿಂದ, ಅದಷ್ಟು ಬೇಗ ಕಾರ್ಖಾನೆಯನ್ನು ಪ್ರಾರಂಭಿಸಬೇಕು ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಒತ್ತಾಯಿಸಿದರು.
ತಾಲೂಕಿನ ಮಾಕವಳ್ಳಿ ಬಳಿ ಇರುವ ಕೋರಮಂಡಲ್ ಸಕ್ಕರೆ ಕಾರ್ಖಾನೆ ಎದುರು ತಾಲೂಕು ಕಬ್ಬು ಬೆಳೆಗಾರರ ಸಂಘವು ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರ ತಾಲೂಕು ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಬ್ಬಿನ ಬೆಲೆ ಕಡಿಮೆ ಇರುವುದರಿಂದ ಈ ವರ್ಷ ಕನಿಷ್ಠ 3 ಸಾವಿರಗಳನ್ನು ಕೊಡಬೇಕು. ಕಾರ್ಖಾನೆಯವರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹಾಗೂ ಪರಿಸರ ಮಾಲಿನ್ಯ ಇಲಾಖೆಯಿಂದ ಅಗತ್ಯ ನಿಯಮಾನುಸಾರ ಅನುಮತಿ ಪಡೆದು ಕಬ್ಬು ಬೆಳೆಗಾರರು, ಎಲ್ಲಾ ಕಾರ್ಮಿಕರ ಹಿತ ದೃಷ್ಠಿಯಿಂದ ವಿದ್ಯುತ್ ಘಟಕವನ್ನು ಪ್ರಾರಂಭಿಸಬೇಕಾಗಿ ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಹಿತ ದೃಷ್ಟಿಯಿಂದ ಸಾಗಾಣಿಕೆ ಮತ್ತು ಕಟಾವಿನ ವೆಚ್ಚವನ್ನು ಕಾರ್ಖಾನೆಯವರೆ ನಿರ್ವಹಿಸಬೇಕು. ಕಾರ್ಖಾನೆಯ ಅಡಳಿತ ಮಂಡಳಿಯವರು ಕಬ್ಬು ಸರಬರಾಜು ಮಾಡಿರುವ ರೈತರಿಗೆ ಗುಣಮಟ್ಟದ ಸಕ್ಕರೆಯನ್ನು ನೀಡಬೇಕು ಎಂದು ಕುಮಾರ್ ಆಗ್ರಹಿಸಿದರು.ಶಾಸಕ ಕೆ.ಸಿ.ನಾರಾಯಣಗೌಡ ಮಾತನಾಡಿ, ರೈತರು ಮತ್ತು ಕಾರ್ಖಾನೆಯ ನಡುವೆ ಕೊಂಡಿಯಂತೆ ಕಬ್ಬು ಬೆಳೆಗಾರರ ಸಂಘವು ಕೆಲಸ ಮಾಡಬೇಕು. ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಆರಂಭವಾದ ಮೇಲೆ ತಾಲೂಕಿನ ರೈತರ ಆರ್ಥಿಕ ಜೀವನ ಮಟ್ಟ ಸುಧಾರಿಸಿದೆ ಎಂದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಕಾರ್ಖಾನೆಯು ಸದೃಢವಾಗಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ವೈಜ್ಞಾನಿಕ ದರ ನೀಡುವುದು. ಸಕಾಲದಲ್ಲಿ ಹಣ ನೀಡುವುದು ಜೊತೆಗೆ ಕಾರ್ಮಿಕರ ಹಿತವನ್ನು ಕಾಪಾಡಬೇಕಾದರೆ ವಿದ್ಯುತ್ ಘಟಕ ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಹೈಟೆಕ್ ತಂತ್ರಜ್ಞಾನದಲ್ಲಿ ಕೋ ಜನರೇಷನ್ ಘಟಕ ಆರಂಭಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಮಾಜಿ ಶಾಸಕ ಬಿ.ಪ್ರಕಾಶ್ ಮಾತನಾಡಿ, ಸಕ್ಕರೆ ಕಾರ್ಖಾನೆಯವರು ವೈಜ್ಞಾನಿಕ ಕಬ್ಬು ಕಟಾವು ಯಂತ್ರಗಳ ಮೂಲಕ ರೈತರ ಕಬ್ಬನ್ನು ಉಚಿತವಾಗಿ ಕಟಾವು ಮಾಡಿಕೊಡುವ ಮೂಲಕ ರೈತರ ನೆರವಿಗೆ ನಿಲ್ಲಬೇಕು ಒತ್ತಾಯ ಮಾಡಿದರು.
ಸಂಘದ ಗೌರವಾಧ್ಯಕ್ಷ ಕೆ.ಜಿ.ಅಣ್ಣಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಭೈಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿ.ಪಂ.ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ, ಸದಸ್ಯರು, ಕೋರಮಂಡಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಸಿ.ಪವನ್‍ಕುಮಾರ್, ಜಿ.ಪಂ. ಮಾಜಿ ಸದಸ್ಯರು ತಾ.ಪಂ. ಉಪಾಧ್ಯಕ್ಷ ಜಾನಕೀರಾಂ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Facebook Comments

Sri Raghav

Admin