ಶುಭ ಶಿವರಾತ್ರಿಯಂದು ಕ್ರೇಜಿಸ್ಟಾರ್ ಅಭಿನಯಿಸುತ್ತಿರುವ 3 ಚಿತ್ರಗಳ ಮುಹೂರ್ತ

Spread the love

Dashgaratha---01

ಬೆಂಗಳೂರು,ಫೆ.24-ಸ್ಯಾಂಡಲ್‍ವುಡ್‍ನ ಕ್ರೇಜಿಸ್ಟಾರ್ ಎಂದೇ ಖ್ಯಾತಿ ಪಡೆದಿರುವ ರವಿಚಂದ್ರನ್ ಪ್ರಮುಖ ಪಾತ್ರವಿರುವ ಮೂರು ಚಿತ್ರಗಳ ಮುಹೂರ್ತ ಸಮಾರಂಭವು ಶಿವರಾತ್ರಿ ಹಬ್ಬ ವಿಶೇಷ ದಿನವಾದ ಇಂದು ನೆರವೇರಿದೆ. ರಾಜಾಜಿನಗರದ 6ನೇ ಬ್ಲಾಕ್‍ನಲ್ಲಿರುವ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ 12.30ಕ್ಕೆ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರಗಳಾದ ರಾಜೇಂದ್ರ ಪೊನ್ನಪ್ಪ , ದಶರಥ, ಬಕಾಸುರ ಮುಹೂರ್ತ ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ.  ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೋಮ್ ಬ್ಯಾನರ್‍ನಲ್ಲಿ ರವಿಚಂದ್ರನ್ ಅವರೇ ನಿರ್ದೇಶಿಸಿ ನಿರ್ಮಾಣ ಮಾಡುತ್ತಿರುವ ರಾಜೇಂದ್ರ ಪೊನ್ನಪ್ಪ ಚಿತ್ರ, ಎಂ.ಎಸ್.ರಾಯ್ ಪ್ರೊಡಕ್ಷನ್ ವತಿಯಿಂದ ಎಂ.ಎಸ್.ರಮೇಶ್ ಅವರ ನಿರ್ದೇಶನ ನಿರ್ಮಾಣದಿಂದ ದಶರಥ ಚಿತ್ರ ಮತ್ತು ಕರ್ವ ಚಿತ್ರದ ನಿರ್ದೇಶಕ ನವನೀತ್, ರೋಹಿತ್ ನಿರ್ಮಾಣದ ಬಕಾಸುರ ಚಿತ್ರದ ಮುಹೂರ್ತವು ಇಂದು ಏಕಕಾಲದಲ್ಲಿ ನಡೆದಿರುವುದು ಕನ್ನಡ ಚಿತ್ರರಂಗದಲ್ಲೇ ಪ್ರಥಮ ಪ್ರಯತ್ನ ಎನ್ನಬಹುದು.

ದೃಶ್ಯ ಚಿತ್ರದಲ್ಲಿ ರಾಜೇಂದ್ರ ಪೊನ್ನಪ್ಪ ಎಂಬ ಹೆಸರಿನಲ್ಲಿ ರವಿಚಂದ್ರನ್ ಅವರು ಅಭಿನಯಿಸಿದ್ದು , ಆ ಚಿತ್ರದದಲ್ಲಿನ ಪಾತ್ರದ ಹೆಸರನ್ನು ಚಿತ್ರದ ಹೆಸರಾಗಿಟ್ಟು ಚಿತ್ರವನ್ನು ರವಿಚಂದ್ರನ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ರವಿಚಂದ್ರನ್ ಅವರ ಬಹುತೇಕ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಜಿ.ಎಸ್.ವಿ.ಸೀತಾರಾಮ್ ಅವರು ಛಾಯಾಗ್ರಹಣ ಮಾಡುತ್ತಿದ್ದು, ಒಟ್ಟಾರೆ ಒಬ್ಬ ನಾಯಕ ಮೂರು ಚಿತ್ರಗಳಲ್ಲಿ ನಟಿಸುತ್ತಿರುವ ಮೂರು ಚಿತ್ರಗಳಿಗೆ ಅದ್ಧೂರಿಯಾಗಿ ಮುಹೂರ್ತ ನಡೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Ravi 2

Ravi 3

Ravi 4

Facebook Comments

Sri Raghav

Admin