ಶೋಷಿತರಿಗೆ ಉಳಿಗಾಲವಿಲ್ಲ : ಭವಿಷ್ಯ
ತಿ.ನರಸೀಪುರ, ಡಿ.21- ಬೌದ್ದ ಧರ್ಮದ ತತ್ವ ಸಿದ್ದಾಂತವನ್ನು ಅನುಸರಿಸದಿದ್ದರೇ ಶೋಷಿತರಿಗೆ ಉಳಿಗಾಲವಿಲ್ಲ ಎಂದು ನಳಂದ ಬುದ್ದ ವಿಹಾರದ ಭೋಧಿರತ್ನಭನ್ತೇಜಿ ಭವಿಷ್ಯ ನುಡಿದರು.ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ರವರ 60ನೇ ಪರಿನಿಬ್ಬಾಣದ ಅಂಗವಾಗಿ ದಸಂಸ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಲ್ಬಣಿಸುತ್ತಿರುವ ಕೋಮುವಾದ, ನೇಪತ್ಯಕ್ಕೆ ಸರಿಯುತ್ತಿರುವ ಶೋಷಿತ ರಾಜಕಾರಣ ಕುರಿತ ವಿಚಾರ ಸಂಕಿರಣ ಉದ್ಘಾಟನೆ ಮಾತನಾಡಿದರು.ಪ್ರತಿಯೊಬ್ಬರಿಗೂ ಸಮಾನತೆ, ಸಹಬಾಳ್ವೆ, ಸಮಾನ ಹಕ್ಕು ದೊರಕಬೇಕೆಂಬ ಉದ್ದೇಶದೊಂದಿಗೆ ಅಂಬೇಡ್ಕರ್ರವರು ಸಂವಿಧಾನ ರಚಿಸಿದರೆ ಇಂತಹ ಮಹಾನ್ ವ್ಯಕ್ತಿಯನ್ನು ಭಾರತೀಯರು ಶೋಷಣೆ ಮಾಡುತ್ತಿದ್ದರೆಂದು ವಿಷಾದಿಸಿದರು.
ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದ ಪದವಿ ಪಡೆದ ನೂರಾರು ವಿದ್ಯಾರ್ಥಿಗಳ ನಡುವೆ ಅತಿ ಬುದ್ದಿವಂತಿಕೆ ಉಳ್ಳವರು ಹಾಗೂ ದೇಶಕ್ಕೆ ಕೊಡುಗೆ ನೀಡಿದ ವಿದ್ಯಾರ್ಥಿ ಎಂಬ ಪಟ್ಟಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲಿಗರಾಗಿಸಿ ಇವರಿಗೆ ಪ್ರಪಂಚದ ಜ್ಞಾನಿ ಎಂಬ ಪ್ರಶಸ್ತಿಯನ್ನು ನೀಡಿತ್ತು ಮಾಹಿತಿ ನೀಡಿದರು. ಇಂತಹ ಜಾತಿ ವ್ಯವಸ್ಥೆ ಇರುವ ದೇಶದಲ್ಲಿ ಶೋಷಿತರು ಬೌದ್ದ ಧರ್ಮದ ತತ್ವ ಸಿದ್ದಾಂತವನ್ನು ಅಳವಡಿಸಿಕೊಳ್ಳಬೇಕು. ಕಾರಣ ನಮ್ಮನ್ನಾಳುವ ರಾಜಕಾರಣಿಗಳಿಂದ ಶೋಷಿತರಿಗೆ 10 ಶತಮಾನ ಕಳೆದರೂ ಸಮಾನತೆ ಸಿಗುವುದು ಕನಸಾಗಿದೆ. ಇದನ್ನು ಅರಿತ ಬಾಬಾ ಸಾಹೇಬ್ ತಮ್ಮ ಕೊನೆಯ ಅವಧಿಯಲ್ಲಿ ಬೌದ್ದ ಧರ್ಮ ಸ್ವೀಕರಿಸಿದ್ದರು ಎಂದರು.
ಜಿಪಂ ಸದಸ್ಯ ಅಶ್ವಿನ್ಕುಮಾರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಸಂವಿಧಾನವನ್ನು 20 ವರ್ಷ ಯಥಾವತ್ತಾಗಿ ಜಾರಿಗೊಳಿಸಿದ್ದರೆ ಪ್ರತಿಯೊಬ್ಬರಿಗೂ ಶಿಕ್ಷಣ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ, ದೊರೆಯುತ್ತಿತ್ತು. ಸಂವಿಧಾನ ಯಥಾವತ್ತಾಗಿ ಜಾರಿಯಾಗದ ಕಾರಣ ಇಂದಿಗೂ ಮೀಸಲಾತಿ ಜೀವಂತವಾಗಿ ಉಳಿದಿದೆ ಎಂದರು.ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ಕುಪ್ಪನಹಳ್ಳಿ ಬೈರಪ್ಪ, ರತ್ನಪುರಿ ಪುಟ್ಟಸ್ವಾಮಿ, ಶಂಭುಲಿಂಗಸ್ವಾಮಿ, ಪುಟ್ಟಬುದ್ದಿ, ತಾಲ್ಲೂಕು ಸಂಚಾಲಕ ಕುಕ್ಕೂರು ರಾಜು, ಉಮಾಮಹದೇವು, ರಾಮಕೃಷ್ಣ, ಲಿಂಗರಾಜು, ಮಹದೇವಸ್ವಾಮಿ, ಆಲಗೂಡು ನಿಂಗರಾಜು, ಹ್ಯಾಕನೂರು ರಾಚಪ್ಪ, ಮುತ್ತುರಾಜ್, ಮಹೇಶ್, ಯಡದೊರೆ ರಾಜು ಮತ್ತಿತರರು ಹಾಜರಿದ್ದರು.