ಶೌಚಾಲಯದಲ್ಲೇ ಸ್ವ-ಘೋಷಿತ ದೇವಮಾನವನ ಕಾಮದಾಟ ಸಿಸಿಟಿವಿಯಲ್ಲಿ ಬಟಾಬಯಲು..!
ಅಮರಾವತಿ, ಡಿ.4-ಮಹಾರಾಷ್ಟ್ರದ ಅಮರಾವತಿಯ ಸ್ವಯಂಘೋಷಿತ ದೇವಮಾನವನೊಬ್ಬನ ರಾಸಲೀಲೆ ವೃತ್ತಾಂತವು ಸ್ನಾನಗೃಹದಲ್ಲಿ ರಹಸ್ಯವಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ನೀಚ ಕೃತ್ಯ ಎಸಗಿದ ಸಂತ ಬಾಲಯೋಗಿ ಮುರಳೀಧರ ಬಾಬಾನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಈತನ ಕಾಮಚೇಷ್ಟೆಯನ್ನು ವ್ಯಕ್ತಿಯೊಬ್ಬರು ಬಟ್ಟಾಬಯಲು ಮಾಡಿದ್ದಾರೆ. ಆತನ ಆಶ್ರಮದ ಸ್ನಾನಗೃಹದಲ್ಲಿ ವ್ಯಕ್ತಿಯೊಬ್ಬರು ಗುಟ್ಟಾಗಿ ಕ್ಯಾಮೆರಾವನ್ನು ಇರಿಸಿದ್ದರು. ಆದರಲ್ಲಿ ಸ್ವಯಂಘೋಷಿತ ದೇವಮಾನದ ರಂಗಿನಾಟ ಬಯಲಾಗಿದೆ. ತನ್ನಲ್ಲಿ ಸಮಸ್ಯೆ ಪರಿಹಾರಕ್ಕೆಂದು ಬಂದ ಮಹಿಳೆಯರಿಗೆ ಶೌಚಾಲಯದಲ್ಲೇ ತೊಂದರೆ ನಿವಾರಿಸುವುದಾಗಿ ಕರೆದೊಯ್ಡು ಈ ಕಾಮುಕ ಲೈಂಗಿಕವಾಗಿ ಅವರನ್ನು ಬಳಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ಈತನಿಂದ ಕಿರುಕುಳಕ್ಕೆ ಒಳಗಾದ ಮಹಿಳೆಯೊಬ್ಬಳು ಸಾಮಾಜಿಕ ಕಾರ್ಯಕರ್ತರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
https://www.youtube.com/watch?v=Egg6m5kV22U
ಈ ನೀಚನ ಕಾಮ ಕರ್ಮಕಾಂಡವನ್ನು ಬಯಲಿಗೆಳೆಯಲು ಆತನ ಆಶ್ರಮದ ಸ್ನಾನಗೃಹದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ರಹಸ್ಯವಾಗಿ ಇರಿಸಿದ್ದರು. ತನ್ನ ಆಶ್ರಮಕ್ಕೆ ಬಂದ ಯುವತಿಯನ್ನು ಬಾಬಾ ಆಲಂಗಿಸಿ ಮುದ್ದಾಡುತ್ತಿರುವ ದೃಶ್ಯ ಸೆರೆಯಾಗಿ ಇನ ಕಾಮಪುರಾಣ ಬಹಿರಂಗಗೊಂಡಿತು. ಪೊಲೀಸರು ಪರಿಶೀಲನೆ ನಡೆಸಿ ಬಾಬಾ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಸ್ವಘೋಷಿತ ದೇವಮಾನವನಿಗಾಗಿ ಪೊಲೀಸರು ಬಲೆ ಬೀಸಿದ್ಧಾರೆ. ನೀಚ ಸ್ವಾಮಿಯನ್ನು ಶೀಘ್ರ ಸೆರೆಹಿಡಿಯುವಂತೆ ಆತನಿಂದ ವಂಚನೆಗೆ ಒಳಗಾದ ಮಹಿಳೆಯರು ಒತ್ತಾಯಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ರಾಸಲೀಲೆ ಪ್ರಕರಣವು ಸ್ಥಳೀಯ ವಾರ್ತಾವಾಹಿನಿಯಲ್ಲಿ ಬಿತ್ತರಗೊಂಡಿತ್ತು.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download