ಶ್ರೀದೇವಿ ಪುತ್ರಿ ಜಾಹ್ನವಿಗೆ 90,000 ಅಭಿಮಾನಿಗಳು..!
ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎಂಬುದೊಂದು ಜನಪ್ರಿಯ ಗಾದೆ. ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದ ಸಾಮ್ರಾಜಿಯಾಗಿ ಮೆರೆದ ಶ್ರೀದೇವಿ ಮತ್ತು ಆಕೆಯ ಮಗಳು ಜಾಹ್ನವಿ ಕಪೂರ್ಗೆ ಈ ಗಾದೆ ಮಾತು ಈಗ ಅನ್ವಯಿಸುತ್ತದೆ. ಸ್ಟಾರ್ ಕಿಡ್ ಜಾಹ್ನವಿ ತನ್ನದೇ ಆದ ಸ್ಟೈಲ್, ಫ್ಯಾಷನ್ ಮತ್ತು ಗ್ಲಾಮರ್ನಿಂದ ಈಗಾಗಲೇ ಬಾಲಿವುಡ್ ಮಂದಿಯ ಕಣ್ಣು ಕುಕ್ಕುತ್ತಿದ್ಧಾಳೆ. ತನ್ನ ತಾಯಿಯ ಹೆಜ್ಜೆ ಗುರುತನ್ನು ಅನುಸರಿಸಲು ಸಿದ್ದವಾಗಿರುವ ಈಕೆ ಬಾಲಿವುಡ್ ಅಂಗಳಕ್ಕೆ ಜಿಗಿಯಲು ರೆಡಿಯಾಗಿದ್ದಾಳೆ. ಜಾಹ್ನವಿ ಪ್ರತಿದಿನ ಇನ್ಸ್ಟಾಗ್ರಾಂನಲ್ಲಿ ತನ್ನ ಗ್ಲಾಮರ್ ಪೋಟೊಗಳು ಮತ್ತು ಸ್ಟೈಲಿಶ್ ಉಡುಪುಗಳ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿರುವುದು ಆಕೆ ಚಿತ್ರರಂಗದತ್ತ ಅಪಾರ ಒಲವು ಹೊಂದಿರುವುದಕ್ಕೆ ಪುರಾವೆ ಒದಗಿಸುತ್ತದೆ. ಚಿತ್ರರಂಗ ಪ್ರವೇಶಿಸಲು ಓರ್ವ ಉದಯೋನ್ಮುಖ ತಾರೆಗೆ ಬೇಕಾಗಿರುವ ಎಲ್ಲ ಬೇಸಿಕ್ ಕ್ವಾಲಿಟಿಗಳು ಈಕೆಗಿದೆ.
ಜೊತೆಗೆ ಪ್ರಖ್ಯಾತ ಅಭಿನೇತ್ರಿಯಾದ ತಾಯಿ ಶ್ರೀದೇವಿ ಮತ್ತು ಸೂಪರ್ಹಿಟ್ ಚಿತ್ರಗಳನ್ನು ನೀಡಿದ ನಿರ್ಮಾಪಕ ಬೋನಿಕಪೂರ್ ಕೂಡ ಮಗಳ ಗುರಿ ಸಾಧನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೇ ಹಾಲಿವುಡ್ ಖ್ಯಾತನಾಮರು ಭಾಗವಹಿಸುವ ಅನೇಕ ಸಭೆ-ಸಮಾರಂಭಗಳಲ್ಲೂ ಶ್ರೀದೇವಿ ಮತ್ತು ಪುತ್ರಿ ಮಿಂಚುತ್ತಿದ್ದಾರೆ.ಮಾತೆಯಂತೆ ರೂಪ, ಸೌಂದರ್ಯ ಮತ್ತು ಪ್ರತಿಭೆಯ ಸಂಯೋಜನೆಯಂತಿರುವ ಈಕೆ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನವೇ 90,000ಕ್ಕೂ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ಹೆಗ್ಗಳಿಕೆ ಈಕೆಯದ್ದು. ಸ್ಟಾರ್ ಕಿಡ್ಗಳ ಗಾಡ್ಫಾದರ್ ಆಗಿರುವ ಖ್ಯಾತ ನಿರ್ದೇಶಕ ಕರಣ್ ಜೋಹರ್ ಮೂಲಕ ಬಾಲಿವುಡ್ಗೆ ಜೆಕೆ ಎಂಟ್ರಿಯಾಗಲಿದ್ದಾಳೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS