ಶ್ರೀನಿವಾಸಪುರ ತಾಲೂಕಿನಲ್ಲಿ ಸಿಡಿಲಿಗೆ ಅನ್ನದಾತ ಬಲಿ

Spread the love

Thunderbolt

ಕೋಲಾರ,ಮೇ 8- ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡುಗು ಸಹಿತ ಮಳೆ ಬಿದ್ದಿದ್ದು , ಸಿಡಿಲಿಗೆ ರೈತನೊಬ್ಬ ಮೃತಪಟ್ಟಿದ್ದಾರೆ.  ತೆಗಲಪಲ್ಲಿ ಗ್ರಾಮದ ಆಂಜನಪ್ಪ(43) ಮೃತ ರೈತ. ನಿನ್ನೆ ಸಂಜೆ ಆಂಜನಪ್ಪ ಎಂಬುವರು ಮನೆಯಿಂದ ಜಮೀನು ಕಡೆ ಹೋಗುತ್ತಿದ್ದಾಗ ಮಳೆ ಬಂದಿದ್ದು , ಈ ವೇಳೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಮೃತರ ನಿವಾಸಕ್ಕೆ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‍ಕುಮಾರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.  ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin