ಶ್ರೀನಿವಾಸ್‍ಪ್ರಸಾದ್ ಬಿಜೆಪಿಗೆ ಬಂದರೆ ಶಕ್ತಿ ಹೆಚ್ಚುತ್ತದೆ : ಸಂಸದ ಶ್ರೀರಾಮುಲು

Spread the love

sriramulu
ಬೀದರ್,ಅ.24- ಶ್ರೀನಿವಾಸ್ ಪ್ರಸಾದ್ ಅವರು ಬಿಜೆಪಿಗೆ ಬರುವುದಾದರೆ ಅವರನ್ನು ಸ್ವಾಗತಿಸುತ್ತೇನೆ. ಅವರು ಬಂದರೆ ಬಿಜೆಪಿ ಬಲ ಕೂಡ ಹೆಚ್ಚಾಗುತ್ತದೆ. ಹೊಸ ಶಕ್ತಿ ಬರುತ್ತದೆ ಎಂದು ಸಂಸದ ಶ್ರೀರಾಮುಲು ತಿಳಿಸಿದ್ದಾರೆ.  ಈಗಾಗಲೇ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ದ್ವೇಷ ರಾಜಕಾರಣದಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ದುಮುಕಿರುವ ಶ್ರೀನಿವಾಸ್ ಪ್ರಸಾದ್ ಅವರು ಮೂಲತಃ ಜನತಾ ಪರಿವಾರದವರೇ. ಬಿಜೆಪಿಗೆ ಅವರು ಬಂದರೆ ಹೊಸ ಅಧ್ಯಯ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.  ನನ್ನ ಸಹೋದರಿ(ಜನಾರ್ಧನರೆಡ್ಡಿ ಮಗಳು) ಮದುವೆ ತುಂಬಾ ಸರಳವಾಗಿ ನಡೆಯುತ್ತದೆ. ಎಲ್ಲರೂ ಅದ್ಧೂರಿ ವಿವಾಹ ಎಂದು ಹೇಳುತ್ತಿದ್ದಾರೆ.

ತಂತ್ರಜ್ಞಾನ ಬಹಳ ಮುಂದೆ ಹೋಗಿದೆ. ಆದ್ದರಿಂದ ಎಲ್ಲರನ್ನು ಆಹ್ವಾನಿಸಲು ಕೆಲವೊಂದು ವಿಶೇಷತೆಗಳನ್ನು ಅಳವಡಿಸಿಕೊಳ್ಳಲಾಗಿದೆ ಅಷ್ಟೆ, ವಿವಾಹದ ಎಲ್ಲ ಲೆಕ್ಕವನ್ನು ಕೊಡುತ್ತೇವೆ. ಇದರಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ಸಂತೋಷ್ ಹೆಗಡೆ, ಹಿರೇಮಠ್ ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಮದುವೆ ವಿಷಯದಲ್ಲಿ ಬೇರೊಂದು ಅರ್ಥ ಕಲ್ಪಿಸುವುದು ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀರಾಮುಲು ವಿನಂತಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin